ಕರ್ನಾಟಕ

karnataka

By

Published : Feb 23, 2023, 3:14 PM IST

ETV Bharat / state

ಶಿವಮೊಗ್ಗದ ಅ.ಪ ರಾಮಭಟ್ಟರು ನಿಧನ: ಸಂತಾಪ ಸೂಚಿಸಿದ ಗೃಹ ಸಚಿವರು

ಶಿವಮೊಗ್ಗದ ರವೀಂದ್ರ ನಗರದ ಶ್ರೀ ಪ್ರಸನ್ನ ಬಲಮುರಿ ಗಣಪತಿ ದೇವಾಲಯದ ಪ್ರಧಾನ ಅರ್ಚಕರಾಗಿದ್ದ ರಾಮಭಟ್ಟರು ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

a p rama bhat
ಅ.ಪ ರಾಮಭಟ್ಟ

ಶಿವಮೊಗ್ಗ: ಇಲ್ಲಿನ ರವೀಂದ್ರ ನಗರದ ಬಲಮುರಿ ಗಣಪತಿ ದೇವಾಲಯದ ಮುಖ್ಯ ಅರ್ಚಕರಾದ ಅ.ಪ.ರಾಮಭಟ್ಟರು (73) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವನ್ನು ಮಣಿಪಾಲದ ಆಸ್ಪತ್ರೆಗೆ ಸೇರಿಸಲಾಗಿತ್ತು. ಕಳೆದ ವಾರವಷ್ಟೇ ಮನೆಗೆ ವಾಪಸ್ ಆಗಿದ್ದರು. ಮತ್ತೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಮೂರು ದಿನಗಳಿಂದ ನಗರದ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.

ಅನೇಕ ಧಾರ್ಮಿಕ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ಅ.ಪ.ರಾಮಭಟ್ಟರು, ಭಜನಾ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ತಾವು ಕಲಿತ ವಿದ್ಯೆಯನ್ನು ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಇತರರಿಗೂ ಸಹ ಉಣಬಡಿಸಿದ್ದರು.‌ ಲೋಕ ಕಲ್ಯಾಣಾರ್ಥಕ್ಕಾಗಿ ಹಲವು ಹೋಮ ಹವನಗಳನ್ನು ಮಾಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಇದನ್ನೂ ಓದಿ:ರಂಗಸ್ಥಳದಲ್ಲೇ ಹೃದಯಾಘಾತ: ಕಟೀಲು ಮೇಳದ ಕಲಾವಿದ ನಿಧನ

ಯಾವುದೇ ಆಡಂಬರಕ್ಕೆ ಆಸೆ ಪಡದೇ ಸರಳವಾಗಿ ಜೀವನ ನಡೆಸುತ್ತಿದ್ದ ಇವರು ಇಡೀ ಜೀವಮಾನವನ್ನು ದೇವರ ಕಾರ್ಯ, ಪೂಜಾ ಕೈಂಕರ್ಯಗಳು, ಧರ್ಮ ಪ್ರಚಾರ, ಲೋಕ ಕಲ್ಯಾಣಾರ್ಥವಾಗಿ ಪೂಜೆ, ಹೋಮ, ಹವನ, ಜಪತಪಗಳನ್ನು ನಡೆಸುವಲ್ಲಿ ಸವೆಸಿದ್ದಾರೆ. ಬಸವನಗುಡಿಯ 5ನೆ ತಿರುವಿನಲ್ಲಿರುವ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೃತರ ಅಂತಿಮ ಸಂಸ್ಕಾರ ಇಂದು ನಡೆಯಲಿದೆ.

ಇದನ್ನೂ ಓದಿ:ಎಸ್.ಕೆ.ಭಗವಾನ್‌ ಅಂತಿಮ ದರ್ಶನ ಪಡೆದ ಶಿವರಾಜ್​ ಕುಮಾರ್​, ಸುಧಾರಾಣಿ

ಗೃಹ ಸಚಿವ ಆರಗ ಜ್ಞಾನೇಂದ್ರ ಸಂತಾಪ: ಅ.ಪ.ರಾಮಭಟ್ಟರ ನಿಧನಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 'ನನ್ನ ಜೀವನದ ಮಾರ್ಗದರ್ಶಕರಾಗಿದ್ದ ಶ್ರೀಯುತ ಅ.ಪ.ರಾಮಭಟ್ಟರ ನಿಧನ ಬಹಳ ದುಃಖ ತಂದಿದೆ. ಸಂಘದ ಸ್ವಯಂಸೇವಕರಾಗಿ, ರವೀಂದ್ರ ನಗರ ಗಣಪತಿ ದೇವಸ್ಥಾನದ ಅರ್ಚಕರಾಗಿ ಅವರು ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಶಿವಮೊಗ್ಗದ ಜನಸಾಮಾನ್ಯರ ಜೊತೆಗೆ, ಪ್ರಭಾವಿ ವ್ಯಕ್ತಿಗಳಿಗೂ ಅಚ್ಚುಮೆಚ್ಚಿನ ಗುರುಗಳಾಗಿದ್ದರು. ಕೊರೊನಾ ಸಂದರ್ಭದಲ್ಲಿ ಎಲ್ಲೂ ಊಟ ಸಿಗದ ಸಂದರ್ಭದಲ್ಲಿ ಮನೆಗೆ ಕರೆಯಿಸಿ ಊಟ ಬಡಿಸುತ್ತಿದ್ದರು. ಶರಾವತಿ ಉಗಮ ಸ್ಥಾನ ಅಂಬುತೀರ್ಥ ಹೊಸ ಕಾಯಕಲ್ಪಕ್ಕೆ ಅಪೇಕ್ಷೆ ವ್ಯಕ್ತಪಡಿಸಿದ್ದರು. ಅದರಂತೆ ನಾವೆಲ್ಲಾ ಸೇರಿ ಅಂಬುತೀರ್ಥದ ಅಭಿವೃದ್ಧಿಗೆ ಹಣ ಹೊಂದಿಸಿದೆವು. ಅವರ ಅಗಲಿಕೆ ನಮಗೆ ಸಾಕಷ್ಟು ನೋವನ್ನುಂಟು ಮಾಡಿದೆ'ಎಂದು ತಿಳಿಸಿದ್ದಾರೆ‌.

ಇದನ್ನೂ ಓದಿ:ಎಸ್‌.ಕೆ.ಭಗವಾನ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಡಾ.ರಾಜ್‌ ಕುಟುಂಬ ಸದಸ್ಯರು

ABOUT THE AUTHOR

...view details