ಕರ್ನಾಟಕ

karnataka

ETV Bharat / state

ಅನೈತಿಕ ಸಂಬಂಧ: ಮೈದುನನಿಂದ ವ್ಯಕ್ತಿಯ ಬರ್ಬರ ಹತ್ಯೆ, ವಿಷ ಕುಡಿದ ಅತ್ತಿಗೆ! - A man Murder in Shimoga

ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾದ ವ್ಯಕ್ತಿಯನ್ನು ಮೈದುನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ವ್ಯಕ್ತಿಯ ಬರ್ಬರ

By

Published : Nov 19, 2019, 3:49 PM IST

Updated : Nov 19, 2019, 8:11 PM IST

ಶಿವಮೊಗ್ಗ: ತನ್ನ ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾದ ವ್ಯಕ್ತಿಯನ್ನು ಮೈದುನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ತಾಲೂಕು ದೊಡ್ಡಮಟ್ಟಿ ಗ್ರಾಮದ ಮಂಜಪ್ಪ(43) ಕೊಲೆಯಾದವ. ಮಂಜಪ್ಪನನ್ನು ಆಂಜನೇಯ ಎಂಬಾತ ಕೊಲೆ ಮಾಡಿದ್ದಾ‌ನೆ. ಆಂಜನೇಯನ ಅಣ್ಣನ ಹೆಂಡತಿ ಜೊತೆ ಮಂಜಪ್ಪ ಅನೈತಿಕ ಸಂಬಂಧ ಹೊಂದಿದ್ದನಂತೆ. ನಿನ್ನೆ ರಾತ್ರಿ‌ ಆ ಮಹಿಳೆ ತನ್ನ ಗಂಡ ಇಲ್ಲದ ವೇಳೆಯಲ್ಲಿ ಮಂಜಪ್ಪನನ್ನು ಮನೆಗೆ ಕರೆಯಿಸಿಕೊಂಡಿದ್ದಳಂತೆ. ವೆಂಕಟೇಶ ಹಾಗೂ ತನ್ನ ಅತ್ತಿಗೆ ಜೊತೆಗಿರುವುದನ್ನು ಕಂಡ ಆಂಜನೇಯ ಕತ್ತಿಯಿಂದ ವೆಂಟಕೇಶನ ತಲೆಗೆ ಹೊಡೆದಿದ್ದಾ‌ನೆ.

ಪರಿಣಾಮ ಮಂಜಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕೊಲೆ ನಂತರ ಮಹಿಳೆ ಓಡಿ ಹೋಗಿ ವಿಷ ಕುಡಿದ್ದಾಳೆ. ಆಕೆಯನ್ನು ಸದ್ಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಲೆ ಮಾಡಿದ ನಂತ್ರ ಆಂಜನೇಯ ಕುಂಸಿ ಪೊಲೀಸರಿಗೆ ಶರಣಾಗಿದ್ದಾನೆ.

Last Updated : Nov 19, 2019, 8:11 PM IST

ABOUT THE AUTHOR

...view details