ಕರ್ನಾಟಕ

karnataka

ETV Bharat / state

ಹೇಡಿತನದ ಜೀವ ಬೆದರಿಕೆ ಕರೆಗೆ ನಾನ್‌ ಬಗ್ಗೋದಿಲ್ಲ.. ಸಚಿವ ಕೆ ಎಸ್‌ ಈಶ್ವರಪ್ಪ - k s eshwarappa ststement in shimoga

ಈ ಹಿಂದೆನೂ ತ್ರಿವಳಿ ತಲಾಖ್ ಕಾಯ್ದೆ ಜಾರಿ ಸಂದರ್ಭದಲ್ಲೂ ನನಗೆ ಒಂದು ಬೆದರಿಕೆ ಕರೆ ಬಂದಿತ್ತು. ಆಗ ಕರೆ ಮಾಡಿದವನಿಗೆ ನಾನು ವಾಪಸ್ ಉತ್ತರ ಕೊಡುವ ಮೊದಲೇ ಮೊಬೈಲ್ ಆಫ್ ಆಗಿತ್ತು. ಇದೀಗ ಸಿಎಎ ವಿಚಾರವಾಗಿ ಮಾತನಾಡಿದ್ದಕ್ಕೆ ಮತ್ತೆ ಜೀವ ಬೆದರಿಕೆ ಕರೆ ಬಂದಿರುವುದಾಗಿ ತಿಳಿಸಿದರು.

k s eshwarappa
ಸಚಿವ ಕೆ.ಎಸ್. ಈಶ್ವರಪ್ಪ

By

Published : Jan 5, 2020, 5:02 PM IST

ಶಿವಮೊಗ್ಗ:ಪೌರತ್ವ (ತಿದ್ದುಪಡಿ) ಕಾಯ್ದೆ ವಿಚಾರವಾಗಿ ಮಾತನಾಡಿದ್ದಕ್ಕೆ ನನಗೆ ಜೀವ ಬೆದರಿಕೆ ಕರೆ ಬಂದಿತ್ತು. ಆದರೆ, ನಾನು ಇಂತಹ ಹೇಡಿತನದ ಬೆದರಿಕೆ ಕರೆಗಳಿಗೆ ಬಗ್ಗೋದಿಲ್ಲ ಅಂತಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ..

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ದಿನದ ಹಿಂದೆ ಹಾಗೂ ನಿನ್ನೆ ರಾತ್ರಿ ಅನಾಮಿಕ ಕರೆ ಬಂದಿರೋದು ನಿಜ. ಸಿಎಎ ಬಗ್ಗೆ ನೀವು ಸಿಕ್ಕಾಪಟ್ಟೆ ಮಾತನಾಡುತ್ತಿದ್ದೀರಿ. 48 ಗಂಟೆಯೊಳಗಾಗಿ ನೀವು ಮಾತನಾಡುವುದನ್ನು ನಿಲ್ಲಿಸದಿದ್ದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಬಂದಿದೆ ಎಂದರು. ಕೇವಲ ಬೆದರಿಕೆ ಕರೆಗಳು ಮಾತ್ರವಲ್ಲ ನಾವು ಮಾಡುತ್ತಿರುವ ಕೆಲಸಗಳನ್ನು ಮೆಚ್ಚಿ ಮುಸ್ಲಿಂ ಹೆಣ್ಣು ಮಕ್ಕಳು ಕೂಡ ಕರೆ ಮಾಡಿ ನಮಗೆ ಹರಸುತ್ತಿದ್ದಾರೆ ಎಂದರು.

ಈ ಹಿಂದೆನೂ ತ್ರಿವಳಿ ತಲಾಖ್ ಕಾಯ್ದೆ ಜಾರಿ ಸಂದರ್ಭದಲ್ಲೂ ನನಗೆ ಒಂದು ಬೆದರಿಕೆ ಕರೆ ಬಂದಿತ್ತು. ಆಗ ಕರೆ ಮಾಡಿದವನಿಗೆ ನಾನು ವಾಪಸ್ ಉತ್ತರ ಕೊಡುವ ಮೊದಲೇ ಮೊಬೈಲ್ ಆಫ್ ಆಗಿತ್ತು. ಇದೀಗ ಸಿಎಎ ವಿಚಾರವಾಗಿ ಮಾತನಾಡಿದ್ದಕ್ಕೆ ಮತ್ತೆ ಜೀವ ಬೆದರಿಕೆ ಕರೆ ಬಂದಿರುವುದಾಗಿ ತಿಳಿಸಿದರು.

ABOUT THE AUTHOR

...view details