ಕರ್ನಾಟಕ

karnataka

ETV Bharat / state

ನಟ ಕಿಚ್ಚ ಸುದೀಪ್‌ ಚಿತ್ರ, ಟಿವಿ ಶೋ ಪ್ರಸಾರ ನಿಲ್ಲಿಸಿ: ಚುನಾವಣಾ ಆಯೋಗಕ್ಕೆ ಪತ್ರ ಬರೆದ ವಕೀಲ ಶ್ರೀಪಾಲ್ - ಸುದೀಪ್ ಬಿಜೆಪಿ ಪರ ಚುನಾವಣಾ ಪ್ರಚಾರ

ಕಿಚ್ಚಾ ಸುದೀಪ್​ ಅವರ ಯಾವುದೇ ಚಲನ ಚಿತ್ರ, ಜಾಹೀರಾತುಗಳು, ಟಿವಿ ಶೋಗಳು ಪ್ರದರ್ಶನವಾಗದಂತೆ ವಕೀಲ ಕೆ.ಪಿ. ಶ್ರೀಪಾಲ್ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

sudeep
ಕೆ.ಪಿ.ಶ್ರೀಪಾಲ್

By

Published : Apr 6, 2023, 11:32 AM IST

Updated : Apr 6, 2023, 12:37 PM IST

ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವುದನ್ನು ವಿಡಿಯೋ ಮೂಲಕ ತಿಳಿಸುತ್ತಿರುವ ವಕೀಲ ಕೆ.ಪಿ. ಶ್ರೀಪಾಲ್

ಶಿವಮೊಗ್ಗ: ಕಿಚ್ಚ ಸುದೀಪ್ ಸಿಎಂ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ನಡೆಸುತ್ತೇನೆ ಎಂದು ಘೋಷಣೆ ಮಾಡುತ್ತಿದ್ದಂತೆ ಅವರ ಚಿತ್ರ ಹಾಗೂ ಟಿವಿ ಶೋ ಗಳನ್ನು ನಿಲ್ಲಿಸುವಂತೆ ಶಿವಮೊಗ್ಗದ ವಕೀಲರು, ಸಾಮಾಜಿಕ ಹೋರಾಟಗಾರರು ಆದ ಕೆ.ಪಿ. ಶ್ರೀಪಾಲ್ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಪತ್ರ ಬರೆದಿದ್ದಾರೆ.

ಪತ್ರದ ಸಾರಾಂಶ:ಕನ್ನಡದ ಚಲನಚಿತ್ರ ನಟ ಮಾನ್ಯ ಕಿಚ್ಚ ಸುದೀಪ್ ಅವರು ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕರಾಗಿರುವುದರಿಂದ ಚುನಾವಣೆ ಮುಗಿಯುವವರೆಗೂ ಅವರ ನಟನೆಯ ಯಾವುದೇ ಚಲನಚಿತ್ರಗಳು ಚಿತ್ರ ಮಂದಿರಗಳಲ್ಲಿ ಮತ್ತು ಟಿ.ವಿ. ಗಳಲ್ಲಿ ಪ್ರದರ್ಶನವಾಗದಂತೆ, ಅವರು ನಡೆಸಿಕೊಡುವ ಟಿ.ವಿ. ಶೋಗಳು ಪ್ರಸಾರವಾಗದಂತೆ ಮತ್ತು ಅವರು ನಟಿಸಿರುವ ಜಾಹೀರಾತುಗಳು ಸಹ ಪ್ರಸಾರವಾಗದಂತೆ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮಜರುಗಿಸಬೇಕು ಎಂದು ವಕೀಕಲರಾದ ಶ್ರೀಪಾಲ್ ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ನಟ ಸುದೀಪ್​ ಬಿಜೆಪಿಗೆ ಸೇರ್ಪಡೆ ವಿಚಾರ.. ಸಿಎಂ ಬೊಮ್ಮಾಯಿ ಮಾಧ್ಯಮಗೋಷ್ಟಿ: ನೇರಪ್ರಸಾರ

ಸುದೀಪ್ ಅವರು ಒಂದು ರಾಜಕೀಯ ಪಕ್ಷದ ವ್ಯಕ್ತಿ ಪರವಾಗಿ ಪ್ರಚಾರ ಮಾಡುತ್ತಿರುವುದನ್ನು ಅವರೇ ಘೋಷಣೆ ಮಾಡಿದ್ದರಿಂದ ಅವರ ನಟನೆಯ ಚಲನ ಚಿತ್ರಗಳು, ಮತ್ತು ಟಿ.ವಿ. ಶೋಗಳು ಹಾಗೂ ಜಾಹೀರಾತುಗಳು ಮತದಾರರ ಮೇಲೆ ಪ್ರಭಾವ ಬೀರುವುದರಿಂದ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ. ಆದ್ದರಿಂದ ತಕ್ಷಣದಿಂದ ಚುನಾವಣಾ ಆಯೋಗ ಈ ವಿಷಯಕ್ಕೆ ಸಂಬಂದಿಸಿದಂತೆ ತುರ್ತು ಕ್ರಮ ಜರುಗಿಸಬೇಕೆಂದು, ಒಬ್ಬ ಜವಾಬ್ದಾರಿಯುತ ನಾಗರೀಕನಾಗಿ ಒತ್ತಾಯಿಸುತ್ತಿದ್ದೇನೆ ಎಂದು ಇ-ಮೇಲ್ ಮೂಲಕ ಶ್ರೀಪಾಲ್​ ಅವರು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ತಾವು ಪತ್ರದಲ್ಲಿ ಉಲ್ಲೇಖಿಸಿರುವ ಅಂಶವನ್ನು ಅವರು ವಿಡಿಯೋ ಮೂಲಕ ಮಾತನಾಡಿದ್ದಾರೆ.

ಮಾಧ್ಯಮಗೋಷ್ಟಿಯಲ್ಲಿ ಸುದೀಪ್​ ಹೇಳಿಕೆ:ಬೆಂಗಳೂರಿನ ಪಂಚತಾರ ಹೋಟೆಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮಗೋಷ್ಟಿ ನಡೆಸಿದ್ದರು. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್​ ಪಕ್ಷ ಸೇರ್ಪಡೆ ವಿಚಾರ ಕುರಿತು ಖುದ್ದಾಗಿ ಮಾಧ್ಯಮಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಸುದೀಪ್​ ಅವರೇ ಹೇಳಿಕೆ ನೀಡಿದ್ದರು. ನಾನು ಯಾವ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವುದಿಲ್ಲ. ಇನ್ನು ಯಾವುದೇ ಪಕ್ಷ ಸೇರ್ಪಡೆ ಬಗ್ಗೆ ಸೂಕ್ತ ವೇದಿಕೆಯಲ್ಲಿ ಮಾತನಾಡುವೆ ಎಂದು ಪ್ರತಿಕ್ರಿಯೆ ನೀಡಿದ್ದರು. ಅಲ್ಲದೆ, ಬಿಜೆಪಿ ಅಥವಾ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವುದನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ. ಸೂಕ್ತ ಸ್ಥಳದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡುವೆ ಎಂದಿದ್ದರು.

ಕಿಚ್ಚನಿಗೆ ಬಂದಿದ್ದ ಬೆದರಿಕೆ ಪತ್ರ: ಅಭಿನಯ ಚಕ್ರವರ್ತಿ ಸುದೀಪ್​ ಅವರಿಗೆ ಅನಾಮಧೇಯ ಪತ್ರಗಳ ಬೆದರಿಕೆ ಪತ್ರ ಬಂದಿತ್ತು. ಆ ಪತ್ರದಲ್ಲಿ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಸುದೀಪ್​ ಕುಟುಂಬದ ಸದಸ್ಯರ ಹೆಸರುಗಳನ್ನು ಉಲ್ಲೇಖಿಸಿ ಬೆದರಿಕೆ ಹಾಕಿದ್ದು ಜೊತೆಗೆ ಖಾಸಗಿ ವಿಡಿಯೋವನ್ನು ರಿಲೀಸ್​ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂಬ ಮಾಹಿತಿ ಇದೆ. ಈ ಕುರಿತಾಗಿ ಸುದೀಪ್​ ಆಪ್ತ ಜಾಕ್​ ಮಂಜು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದರು. ಇದಕ್ಕೆ ಆರೋಗ್ಯ ಸಚಿವ ಡಾ. ಸುಧಾಕರ್​ ಕೂಡ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದರು.

ಇದನ್ನೂ ಓದಿ:ಕೋಮುದ್ವೇಷ ಭಾಷಣ ಆರೋಪ: ಸಚಿವ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲು

Last Updated : Apr 6, 2023, 12:37 PM IST

ABOUT THE AUTHOR

...view details