ಮೈಸೂರು: ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಗಳನ್ನು ಅಪರಿಚಿತ ಯುವಕರ ಗುಂಪೊಂದು ತಡೆದು ಹಲ್ಲೆ ನಡೆಸಿ ಪರಾರಿಯಾಗಿರು ಘಟನೆ ಕೆ.ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರು: ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ ಯುವಕರ ಗುಂಪು - A group of young people
ಪಾಲಿಕೆ ಹಿಂಭಾಗದ ರಸ್ತೆಯಲ್ಲಿ ರಾತ್ರಿ ವೇಳೆ ವಿಜಯನಗರದ ನಿವಾಸಿ ಅನಿಲ್ ಮತ್ತು ಆತನ ಸ್ನೇಹಿತರು ಕಾರಿನಲ್ಲಿ ಬರುತ್ತಿದ್ದ ವೇಳೆ ಯುವಕರ ಗುಂಪೊಂದು ಕಾರನ್ನು ಅಡ್ಡಗಟ್ಟಿದಲ್ಲದೆ, ಗಲಾಟೆ ನಡೆಸಿ ಅನಿಲ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ.
ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ ಯುವಕರ ಗುಂಪು
ನಗರದ ಪಾಲಿಕೆ ಹಿಂಭಾಗದ ರಸ್ತೆಯಲ್ಲಿ ರಾತ್ರಿ ವೇಳೆ ವಿಜಯನಗರದ ನಿವಾಸಿ ಅನಿಲ್ ಮತ್ತು ಆತನ ಸ್ನೇಹಿತರು ಕಾರಿನಲ್ಲಿ ಬರುತ್ತಿದ್ದರು, ಈ ವೇಳೆ ಯುವಕರ ಗುಂಪೊಂದು ಕಾರನ್ನು ಅಡ್ಡಗಟ್ಟಿದಲ್ಲದೆ, ಗಲಾಟೆ ನಡೆಸಿ ಅನಿಲ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ.
ಅನಿಲ್ ತಲೆಗೆ ಗಂಭೀರ ಗಾಯವಾಗಿದ್ದು, ಈ ಸಂಬಂಧ ಅನಿಲ್ ಹಾಗೂ ಆತನ ಸ್ನೇಹಿತರು ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.