ಶಿವಮೊಗ್ಗ: ಹೋಟೆಲ್ ಒಳಗೆ ಹೋಗಿ ಕುಡಿಯಿರಿ ಎಂದು ಹೇಳಿದಕ್ಕೆ ನನ್ನ ಜೊತೆ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸೇರಿದಂತೆ ಒಟ್ಟು ಐವರು ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿ ಹೋಟೆಲ್ ಮಾಲೀಕ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾಗರ ತಾಲೂಕು ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಅಶೋಕ್ ಮರಗಿ ಹಾಗೂ ಬೆಂಬಲಿಗರು ನಮ್ಮ ಸೌಪರ್ಣಿಕಾ ಹೋಟೆಲ್ ಮೇಲೆ ದಾಳಿ ನಡೆಸಿ, ಹೋಟೆಲ್ನಲ್ಲಿರುವ ಪೀಠೋಪಕರಣಗಳನ್ನು ದ್ವಂಸ ಮಾಡಿ, ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಹೋಟೆಲ್ ಮಾಲೀಕ ವಿರೇಶ್ ಆರೋಪಿಸಿ ಸಾಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಾಗರ ಪಟ್ಟಣದ ವರದಹಳ್ಳಿ ತಿರುವಿನ ಬಳಿ ಇರುವ ಸೌಪರ್ಣಿಕಾ ಹೋಟೆಲ್ನಲ್ಲಿ ಕಳೆದ ರಾತ್ರಿ ಸಾಗರ ತಾಲೂಕು ಪಂಚಾಯತಿಯ ಮಾಜಿ ಉಪಾಧ್ಯಕ್ಷ ಅಶೋಕ್ ಮರಗಿ ಹಾಗೂ ಬೆಂಬಲಿಗರು ಕುಡಿದು ಗಲಾಟೆ ಮಾಡಿದ್ದಾರೆ ಎಂದು ಹೋಟೆಲ್ ಮಾಲೀಕ ವಿರೇಶ್ ಆರೋಪ ಮಾಡಿದ್ದಾರೆ. ಕುಡಿದು ಹೊರಗೆ ಗಲಾಟೆ ಮಾಡಬೇಡಿ ಎಂದು ಹೇಳಿದ್ದೆ. ಇದಕ್ಕೆ ಅಶೋಕ್ ಮರಗಿ ಹಾಗೂ ಬೆಂಬಲಿಗರು ಕೋಪಗೊಂಡು ಹೋಟೆಲ್ ಒಳಗೆ ನುಗ್ಗಿ ಪಿಠೋಪಕರಣಗಳನ್ನು ದ್ವಂಸ ಮಾಡಿದ್ದಾರೆ. ಅಲ್ಲದೆ ಹೋಟೆಲ್ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ನಂತರ ಹೋಟೆಲ್ ಮುಂಭಾಗದ ನೇಮ್ ಬೋರ್ಡ್ಅನ್ನು ಸಹ ಹೊಡೆದು ಹಾಕಿದ್ದಾರೆ ಎಂದು ಹೋಟೆಲ್ ಮಾಲೀಕ ವಿರೇಶ್ ಆರೋಪಿಸಿದ್ದಾರೆ. ಬಳಿಕ ಈ ಘಟನೆ ಬಗ್ಗೆ ಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.