ಕರ್ನಾಟಕ

karnataka

ETV Bharat / state

ಅಪಹರಿಸಿ, ಎಟಿಎಂನಿಂದ ಹಣ ಡ್ರಾ ಮಾಡಿಸಿಕೊಂಡ ದರೋಡೆಕೋರರಿಗೆ ಶಿಕ್ಷೆ

ಮಹಿಳೆಯನ್ನು ಅಪಹರಿಸಿ ಹಣ ವಸೂಲಿ ಮಾಡಿದ್ದ ದರೋಡೆಕೋರರಿಗೆ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 7 ವರ್ಷ ಕಾರಾಗೃಹ ಶಿಕ್ಷೆ ವಿಧಿ ತೀರ್ಪು ನೀಡಿದೆ.

ದರೋಡೆಕೋರರಿಗೆ 7 ವರ್ಷ ಸಜೆ

By

Published : Nov 19, 2019, 9:35 PM IST

ಶಿವಮೊಗ್ಗ: ಮಹಿಳೆಯನ್ನು ಆಟೋದಲ್ಲಿ ಅಪಹರಿಸಿ ಹಣ ವಸೂಲಿ ಮಾಡಿದ್ದ ದರೋಡೆಕೋರರಿಗೆ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟಿದ್ದ ಮಹಿಳೆಯನ್ನು ಬೆದರಿಸಿ, ಹಣ, ಮೊಬೈಲ್ ಹಾಗೂ ಎಟಿಎಂಗೆ ಬಂದು ಆಕೆಯಿಂದಲೇ 9,500 ರೂ. ಹಣ ಡ್ರಾ ಮಾಡಿಸಿಕೊಂಡು ಹೋಗಿದ್ದ ನಾಲ್ವರು ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ. ನಾಲ್ವರು ಆರೋಪಿಗಳಿಗೂ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಕಳೆದ ವರ್ಷ ತೀರ್ಥಹಳ್ಳಿ ತಾಲೂಕು ಬಾಳೆಕೊಪ್ಪ ಗ್ರಾಮದಲ್ಲಿ ಸಹನ ಎಂಬ ಮಹಿಳೆ ಬೆಂಗಳೂರಿಗೆ ಹೋಗಲು ಶಿವಮೊಗ್ಗದ ಕೆಎಸ್ಆರ್​​ಟಿಸಿ ಬಸ್ ನಿಲ್ದಾಣಕ್ಕೆ ಬಂದ ವೇಳೆ ಮುಬಾರಕ್(21), ಸಮೀರ್(28), ನಯಾಜ್(22) ಹಾಗೂ ರಜಾಕ್ ಆಟೋದಲ್ಲಿ ಅಪಹರಿಸಿ ಗೋವಿಂದರಾಜಪುರ ಬಳಿಯ ದಾನಮ್ಮ ಕೆರೆಯ ಬಳಿ ಕರೆದುಕೊಂಡು ಹೋಗಿ ಥಳಿಸಿ, ಅವರ ಬಳಿ ಇದ್ದ 3 ಸಾವಿರ ನಗದು, ಮೊಬೈಲ್ ಕಿತ್ತುಕೊಂಡು ನಂತ್ರ ಗೋಪಾಳ ಮುಖ್ಯ ರಸ್ತೆಯಲ್ಲಿನ ಸಿಂಡಿಕೇಟ್ ಬ್ಯಾಂಕ್​​ನ ಎಟಿಎಂಗೆ ಕರೆತಂದಿದ್ದರು. ಬಳಿಕ ಅಲ್ಲಿನ ಎಟಿಎಂನಿಂದ 9,500 ರೂ. ಡ್ರಾ ಮಾಡಿಸಿಕೊಂಡು, ಸಹನಾಗೆ 200 ರೂ ನೀಡಿ, ಖಾಸಗಿ ಬಸ್ ನಿಲ್ದಾಣದ ಬಳಿ ಬಿಟ್ಟು ಪರಾರಿಯಾಗಿದ್ದರು.

ಕೇಸು ದಾಖಲಿಸಿಕೊಂಡಿದ್ದ ದೊಡ್ಡಪೇಟೆಯ ಅಂದಿನ ಸಿಪಿಐ ಹರೀಶ್ ಅವರು ತನಿಖೆ ನಡೆಸಿ, ನಾಲ್ವರ ವಿರುದ್ಧ ಚಾರ್ಜ್ ಶೀಟ್ ದಾಖಲು ಮಾಡಿದ್ದರು. ಕೋರ್ಟ್​ನಲ್ಲಿ ನಾಲ್ವರ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಜಯಂತ್ ಈ ಆರೋಪಿಗಳಿಗೆ ಏಳು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

ABOUT THE AUTHOR

...view details