ಕರ್ನಾಟಕ

karnataka

ETV Bharat / state

ಅನ್ನ ಹಾಕಿದ ಮಾಲೀಕನ ಪ್ರಾಣ ಉಳಿಸಿದ ಶ್ವಾನ... ಆದ್ರೆ ವಿಧಿ ಹೇಗಿದೆ ನೋಡಿ! - undefined

ಅನ್ನ ಹಾಕಿದ ಮಾಲೀಕನನ್ನು ಸಾವಿನ ದವಡೆಯಿಂದ ಕಾಪಾಡಿದ ಸಾಕು ನಾಯಿಯೊಂದು ತನ್ನ ಪ್ರಾಣ ಬಿಟ್ಟಿದೆ.

ಉಪ್ಪಿಟ್ಟ ಧಣಿಯ ಜೀವ ಉಳಿಸಿ ಪ್ರಾಣಬಿಟ್ಟ ನಾಯಿ

By

Published : Jun 10, 2019, 5:23 PM IST

ಶಿವಮೊಗ್ಗ:ಇನ್ನೇನು ಹಾವೊಂದು ಮಾಲೀಕನಿಗೆ ಕಚ್ಚಿಬಿಡುತ್ತದೆ ಎನ್ನುವಷ್ಟರಲ್ಲಿ ಸಾಕು ನಾಯಿ ಆತನನ್ನ ಕಾಪಾಡಿ ಕೊನೆಗೆ ತಾನೇ ಬಲಿಯಾಗಿದೆ.

ಮಾಲೀಕನ ಜೀವ ಉಳಿಸಿ ಪ್ರಾಣ ಬಿಟ್ಟ ನಾಯಿ

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕವಲಿ ಗ್ರಾಮದ ಶೇಖಪ್ಪ ಎಂಬ ವ್ಯಕ್ತಿ ಅಂತರಗಂಗೆ ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡುವಾಗ ಹಾವೊಂದು ಕಚ್ಚಲು ಯತ್ನಿಸಿದೆ.

ಇದನ್ನ ಗಮನಿಸಿದ ನಾಯಿ ಅರೆ ಕ್ಷಣದಲ್ಲಿ ಹಾವನ್ನು ಕಚ್ಚಿ ಎಳೆದೊಯ್ದು ಮಾಲೀಕನನ್ನ ಸಾವಿನ ದವಡೆಯಿಂದ ರಕ್ಷಣೆ ಮಾಡಿದೆ. ಇನ್ನೇನು ತನ್ನ ಜೀವ ಕಾಪಾಡಿದ ನಾಯಿ ಕಡೆ ಮಾಲೀಕ ಧನ್ಯತೆಯ ಕುಡಿನೋಟ ಬೀರುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು. ಮಾಲೀಕನಿಗೆ ಕಚ್ಚಬೇಕಿದ್ದ ಹಾವು ತನ್ನ ವಿಷದ ಹಲ್ಲನ್ನು ನಾಯಿಯ ದೇಹಕ್ಕೆ ನಾಟಿಸಿತ್ತು.

ಕೆಲ ಕಾಲ ಅಲ್ಲೇ ಒದ್ದಾಡಿದ ನಾಯಿ ಅಸುನೀಗಿದೆ. ಅನ್ನ ಹಾಕಿದ ಮಾಲೀಕನ ಪ್ರಾಣ ಕಾಪಾಡುವ ಮೂಲಕ ತನ್ನ ಋಣ ತೀರಿಸಿ ಇಹಲೋಕ ತ್ಯಜಿಸಿದೆ.

For All Latest Updates

TAGGED:

ABOUT THE AUTHOR

...view details