ಶಿವಮೊಗ್ಗ: ತೋಟದ ಕೃಷಿ ಹೊಂಡದಲ್ಲಿ ಇದ್ದ ಮೊಸಳೆಯನ್ನು ಅರಣ್ಯಾಧಿಕಾರಿಗಳು ಹಾಗೂ ಶಿವಮೊಗ್ಗ ಅನಿಮಲ್ ರೆಸ್ಕ್ಯೂ ತಂಡದ ಸದಸ್ಯರು ಸುರಕ್ಷಿತವಾಗಿ ಹಿಡಿದು ನದಿಗೆ ಬಿಟ್ಟಿದ್ದಾರೆ.
ಕೃಷಿ ಕೊಂಡಕ್ಕೆ ಬಂದಿದ್ದ ಮೊಸಳೆ ರಕ್ಷಣೆ - ಶಿವಮೊಗ್ಗ
ಕುಪ್ಪಗುಡ್ಡೆ ಗ್ರಾಮದ ತೋಟವೊಂದರ ಕೃಷಿ ಹೊಂಡದಲ್ಲಿ ಮೊಸಳೆಯೊಂದು ಪತ್ತೆಯಾಗಿದೆ. ಇದನ್ನು ಅರಣ್ಯಾಧಿಕಾರಿಗಳು ಹಾಗೂ ಶಿವಮೊಗ್ಗ ಅನಿಮಲ್ ರೆಸ್ಕ್ಯೂ ತಂಡದವರು ಸುರಕ್ಷಿತವಾಗಿ ಹಿಡಿದು ನದಿಗೆ ಬಿಟ್ಟಿದ್ದಾರೆ.
ಸೊರಬ ತಾಲೂಕು ಕುಪ್ಪಗುಡ್ಡೆ ಗ್ರಾಮದ ತೋಟವೊಂದರ ಕೃಷಿ ಹೊಂಡದಲ್ಲಿ ಈ ಮೊಸಳೆ ಪತ್ತೆಯಾಗಿತ್ತು. ಮೊಸಳೆ ಇರುವ ಬಗ್ಗೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಅರಣ್ಯಾಧಿಕಾರಿಗಳು ಶಿವಮೊಗ್ಗದ ಪ್ರಾಣಿ ರಕ್ಷಣಾ ತಂಡದ ಪ್ರಸಾದ್ ಹಾಗೂ ರಂಜಿತ್ ಎಂಬುವರು ಅರಣ್ಯಾಧಿಕಾರಿಗಳ ಜೊತೆ ಎರಡು ದಿನ ಮೊಸಳೆಯ ಚಲನವಲನವನ್ನು ಗಮನಿಸಿ ನಿನ್ನೆ ರಾತ್ರಿ ಅದನ್ನು ಹಿಡಿದು ಸುರಕ್ಷಿತವಾಗಿ ಶರಾವತಿ ನದಿ ಹಿನ್ನೀರಿಗೆ ಬಿಟ್ಟಿದ್ದಾರೆ. ಮೊಸಳೆಯು ಸುಮಾರು ಎರಡು ವರ್ಷದ್ದಾಗಿದ್ದು, ಮೂರುವರೆ ಅಡಿ ಉದ್ದವಿತ್ತು. ಮೊಸಳೆ ಸೆರೆ ಹಿಡಿದಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.