ಕರ್ನಾಟಕ

karnataka

ETV Bharat / state

ಮನೆಯೊಳಗೆ ನುಗ್ಗಿ ನಾಯಿಯನ್ನು ಹೊತ್ತೊಯ್ದ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - cheetha carried dog news of theerthalli

ಶುಕ್ರವಾರ ರಾತ್ರಿ ಮನೆಯ ಒಳ ಭಾಗದಲ್ಲಿದ್ದ ಡ್ಯಾಶ್ ಹ್ಯಾಂಡ್ ನಾಯಿಯನ್ನು ಚಿರತೆಯೊಂದು ಎತ್ತರದ ಕಾಂಪೌಂಡ್ ಹಾರಿ ಮನೆಯ ಒಳ ನುಗ್ಗಿ ಹೊತ್ತೊಯ್ದ ಘಟನೆ ತೀರ್ಥಹಳ್ಳಿ ತಾಲೂಕಿನ ಬಸವಾನಿ ಸಮೀಪದ ಹೊಳೆಕೊಪ್ಪದ ರಘುನಾಥ್ ಎಂಬುವರ ಮನೆಯಲ್ಲಿ ನಡೆದಿದೆ.

ಮನೆಯೊಳಗೆ ನುಗ್ಗಿ ನಾಯಿಯನ್ನು ಹೊತ್ತೊಯ್ದ ಚಿರತೆ : ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

By

Published : Sep 15, 2019, 3:36 PM IST

ಶಿವಮೊಗ್ಗ: ಶುಕ್ರವಾರ ರಾತ್ರಿ ಮನೆಯ ಒಳ ಭಾಗದಲ್ಲಿದ್ದ ಡ್ಯಾಶ್ ಹ್ಯಾಂಡ್ ನಾಯಿಯನ್ನು ಚಿರತೆಯೊಂದು ಎತ್ತರದ ಕಾಂಪೌಂಡ್ ಹಾರಿ ಮನೆಯ ಒಳ ನುಗ್ಗಿ ಹೊತ್ತೊಯ್ದ ಘಟನೆ ತೀರ್ಥಹಳ್ಳಿ ತಾಲೂಕಿನ ಬಸವಾನಿ ಸಮೀಪದ ಹೊಳೆಕೊಪ್ಪದಲ್ಲಿ ನಡೆದಿದೆ.

ಮನೆಯೊಳಗೆ ನುಗ್ಗಿ ನಾಯಿಯನ್ನು ಹೊತ್ತೊಯ್ದ ಚಿರತೆ : ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಹೊಳೆಕೊಪ್ಪ ರಘುನಾಥ್ ಎಂಬುವವರ ಮನೆಯಲ್ಲಿ ರಾತ್ರಿ 1.27ರ ಸಮಯದಲ್ಲಿ ಈ ಘಟನೆ ನಡೆದಿದೆ. ಎರಡು ನಾಯಿಗಳಿದ್ದು, ಒಂದು ನಾಯಿ ಚಿರತೆಯಿಂದ ತಪ್ಪಿಸಿಕೊಂಡಿದೆ. ಒಂದು ನಾಯಿಯನ್ನು ಚಿರತೆ ಹೊತ್ತೊಯ್ಯುತ್ತಿರುವ ದೃಶ್ಯ ಮನೆಯ ಹೊರ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

ಮನೆಯ ಮುಂಭಾಗದ 5 ಅಡಿ ಎತ್ತರದ ಕಾಂಪೌಂಡಿನಲ್ಲಿ ಕುಳಿತು ಎರಡು ನಿಮಿಷದಲ್ಲಿ ಹೊಂಚು ಹಾಕಿದ ಚಿರತೆ ಮನೆಯ ಒಳಗೆ ನುಗ್ಗಿತ್ತು. ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚುತ್ತಿದ್ದು, ಜನರು ಕೂಡಾ ರಾತ್ರಿ ಹೊತ್ತು ತಿರುಗಾಡುವುದಕ್ಕೆ ಆತಂಕ ಪಡುತ್ತಿದ್ದಾರೆ. ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದರೂ ಯಾವುದೇ ಪ್ರಯೋಜನಾಗಿಲ್ಲವೆಂದು ಸಾರ್ವಜನಿಕರು ಅಸಮಾಧಾನ ತೋಡಿಕೊಂಡಿದ್ದಾರೆ.

ABOUT THE AUTHOR

...view details