ಶಿವಮೊಗ್ಗ:ಮಗನನ್ನು ಆಳ್ವಾಸ್ ಕಾಲೇಜಿಗೆ ಬಿಟ್ಟು ವಾಪಸ್ ಆಗುವಾಗ ಕಾರು ನಿಯಂತ್ರಣ ತಪ್ಪಿ, ಅಡಿಕೆ ತೋಟಕ್ಕೆ ನುಗ್ಗಿದ ಪರಿಣಾಮ ತರೀಕೆರೆ ಮೂಲದ ವಕೀಲರೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ತರಿಕೇರೆ ಮೂಲದ ಸಂಪತ್ ಎಂಬುವರು ತಮ್ಮ ಮಗನನ್ನು ಆಳ್ವಾಸ್ ಪಿಯುಸಿ ಕಾಲೇಜಿಗೆ ಬಿಟ್ಟು ತಮ್ಮೂರಿಗೆ ವಾಪಸ್ ಆಗುವಾಗ ತೀರ್ಥಹಳ್ಳಿಯ ಮಂಡಗದ್ದೆ ಸಮೀಪದ ಅಡಿಕೆ ತೋಟಕ್ಕೆ ಕಾರು ನಿಯಂತ್ರಣ ತಪ್ಪಿ ನುಗ್ಗಿದೆ.
ಮಗನನ್ನು ಕಾಲೇಜಿಗೆ ಬಿಟ್ಟು ವಾಪಸ್ ಆಗುವಾಗ ದುರಂತ: ಕಾರು ಪಲ್ಟಿಯಾಗಿ ವಕೀಲ ಸಾವು - car palty news of shimogga
ಮಗನನ್ನು ಕಾಲೇಜಿಗೆ ಬಿಟ್ಟು ವಾಪಸ್ ಆಗುವಾಗ ಕಾರು ಪಲ್ಟಿಯಾಗಿ ಅಡಿಕೆ ತೋಟಕ್ಕೆ ನುಗ್ಗಿದೆ. ಪರಿಣಾಮ ತರಿಕೇರೆ ಮೂಲದ ವಕೀಲರೊಬ್ಬರು ಮೃತಪಟ್ಟಿದ್ದು, ಅವರ ಪತ್ನಿ ಮತ್ತು ಮತ್ತೋರ್ವ ಮಗ ಗಾಯಗೊಂಡಿದ್ದಾರೆ.
ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ನುಗ್ಗಿದ ಕಾರು
ಇದರ ಪರಿಣಾಮ ಕಾರು ಪಲ್ಟಿಯಾಗಿದೆ. ಇದರಿಂದ ಕಾರು ಚಾಲಾಯಿಸುತ್ತಿದ್ದ ಸಂಪತ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅವರ ಪತ್ನಿ ಹಾಗೂ ಇನ್ನೋರ್ವ ಮಗ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಶಿವಮೊಗ್ಗ ಅಪರ ಜಿಲ್ಲಾಧಿಕಾರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ
TAGGED:
car palty news of shimogga