ಶಿವಮೊಗ್ಗ :ನಿರ್ಮಾಣ ಹಂತದ ಸೇತುವೆಯ ತಡೆಗೋಡೆ ಕುಸಿದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಆಗುಂಬೆ ಸಮೀಪದ ಬಾಳೆಹಳ್ಳಿ ಗ್ರಾಮದ ಗುಜ್ಜುಗುಳಿ ಸೇತುವೆ ಬಳಿ ನಡೆದಿದೆ.
ಸೇತುವೆ ಅಡಿಪಾಯದ ತಡೆಗೋಡೆಯ ಸೆಂಟ್ರಿಂಗ್ ತೆಗೆಯುವಾಗ ತಡೆಗೋಡೆ ಕುಸಿದು ಕಾರ್ಮಿಕ ಸಾವನ್ನಪ್ಪಿದ್ದಾನೆ. ಮೃತ ಕಾರ್ಮಿಕನನ್ನು ಹಾವೇರಿ ಮೂಲದ ಸುಲೈಮಾನ್ ಖಾನಸಾಬ್ ಎಂದು ಗುರುತಿಸಲಾಗಿದೆ. ಗೋಡೆಯಡಿ ಸಿಲುಕಿದ್ದ ಕಾರ್ಮಿಕನನ್ನು ಸಹ ಕಾರ್ಮಿಕರು ಜೆಸಿಬಿ ಬಳಸಿ ಹೊರ ತೆಗೆದಿದ್ದಾರೆ. ಇತ್ತೀಚೆಗಷ್ಟೇ ಬಾಳೆಹಳ್ಳಿ ಗ್ರಾಮದ ಬಳಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು.