ಶಿವಮೊಗ್ಗ: ಛತ್ತೀಸ್‍ಗಡದ ರಾಯ್‍ಪುರ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಕ್ವಾಡ್ ಸ್ಕೇಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕೇಂದ್ರೀಯ ವಿದ್ಯಾಲಯದ 3ನೇ ತರಗತಿ ವಿದ್ಯಾರ್ಥಿ ಕೆವಿನ್ ಜೆ. ಹೊನ್ನಳ್ಳಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದಿದ್ದಾರೆ.
ರಾಷ್ಟಮಟ್ಟದ ಕ್ವಾಡ್ ಸ್ಕೇಟಿಂಗ್: ಕೆವಿನ್ ಜೆ. ಹೊನ್ನಳ್ಳಿಗೆ ಎರಡು ಪದಕ - aboy win medal in quad skating championship
ಛತ್ತೀಸ್‍ಗಡದ ರಾಯ್‍ಪುರ್ ನಲ್ಲಿ ನಡೆದ ರಾಷ್ಟ್ರಮಟ್ಟದ ಕ್ವಾಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕೆವಿನ್ ಜೆ. ಹೊನ್ನಳ್ಳಿ ಬೆಳ್ಳಿ ಮತ್ತು ಕಂಚಿನ ಪಡೆದಿದ್ದಾರೆ.
ರಾಷ್ಟಮಟ್ಟದ ಕ್ವಾಡ್ ಸ್ಕೇಟಿಂಗ್‍ನಲ್ಲಿ ಸ್ಪರ್ಧೆಯಲ್ಲಿ ಕೆವಿನ್ ಜೆ. ಹೊನ್ನಳ್ಳಿಗೆ ಎರಡು ಪದಕ
ಇವರು ಜೂ. 17 ರಿಂದ 19 ರ ವರೆಗೆ ನಡೆದ ಚಾಂಪಿಯನ್‍ಶಿಪ್‍ನ ರಿಂಕ್ -1 (200 ಮೀ) ವಿಭಾಗದ ಸ್ಪರ್ಧೆಯಲ್ಲಿ ಬೆಳ್ಳಿಪದಕ ಹಾಗೂ ರಿಂಕ್- 3 (800ಮೀ) ವಿಭಾಗದ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಮಂಜುಳ ಮತ್ತು ಜೋಸೆಫ್ ಆರ್. ಹೊನ್ನಳ್ಳಿಯವರ ಮಗನಾಗಿದ್ದು, ಬಾಲಕನ ಸಾಧನೆಗೆ ಶಾಲೆಯ ಪ್ರಾಂಶುಪಾಲರು, ಅಧ್ಯಾಪಕ ವರ್ಗ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ :ರಣಜಿ ಫೈನಲ್ 2ನೇ ದಿನದಾಟ: ಮುಂಬೈಗೆ ಸರ್ಫರಾಜ್ ಶತಕದ ಬಲ, ಮಧ್ಯಪ್ರದೇಶ 1 ವಿಕೆಟ್ಗೆ 123