ಶಿವಮೊಗ್ಗ: ತಂದೆಯೊಂದಿಗೆ ಭಿಕ್ಷಾಟನೆಯಲ್ಲಿ ತೂಡಗಿದ್ದ 9 ವರ್ಷದ ಬಾಲಕನನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ರಕ್ಷಣೆ ಮಾಡಲಾಗಿದೆ.
ತಂದೆಯೊಂದಿಗೆ 9 ವರ್ಷದ ಬಾಲಕ ಭಿಕ್ಷಾಟನೆ: ಮಕ್ಕಳ ರಕ್ಷಣಾ ಘಟಕದಿಂದ ರಕ್ಷಣೆ - Sagara taluk of Shimoga district
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ರಸ್ತೆಯಲ್ಲಿ ತನ್ನ ತಂದೆಯೊಂದಿಗೆ ಮಾರಮ್ಮ ದೇವರನ್ನು ಹೊತ್ತು ಭಿಕ್ಷೆ ಬೇಡುತ್ತಿದ್ದ ಅಲೆಮಾರಿ ಜನಾಂಗದ ಬಾಲಕನನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ರಕ್ಷಣೆ ಮಾಡಿ 'ಸುರಭಿ' ತೆರೆದ ತಂಗುದಾಣದಲ್ಲಿ ಇರಿಸಲಾಗಿದೆ.

ತಂದೆಯೊಂದಿಗೆ 9 ವರ್ಷದ ಬಾಲಕ ಭಿಕ್ಷಾಟನೆ: ಮಕ್ಕಳ ರಕ್ಷಣಾ ಘಟಕದಿಂದ ರಕ್ಷಣೆ
ಸಾಗರ ತಾಲೂಕಿನ ರಸ್ತೆಯಲ್ಲಿ ಅಲೆಮಾರಿ ಜನಾಂಗದ ಬಾಲಕನೊಬ್ಬ ತನ್ನ ತಂದೆಯೊಂದಿಗೆ ಮಾರಮ್ಮ ದೇವರನ್ನು ಹೊತ್ತು ಭಿಕ್ಷೆ ಬೇಡುತ್ತಿದ್ದ. ಈ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಗಾಯಿತ್ರಿ ಹಾಗೂ ಸಹಾಯವಾಣಿ ಸಂಯೋಜಕರಾದ ಪರಶುರಾಮ್ ಅವರು ಬಾಲಕನನ್ನು ರಕ್ಷಿಸಿದ್ದಾರೆ.
ಸದ್ಯಕ್ಕೆ ಬಾಲಕನನ್ನು 'ಸುರಭಿ' ತೆರೆದ ತಂಗುದಾಣದಲ್ಲಿ ಇರಿಸಲಾಗಿದೆ.