ಶಿವಮೊಗ್ಗ: ಅಕ್ಷರ, ಅಕ್ಷಯ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ರಾಜ್ಯಕ್ಕೆ ನೀಡಿದ ಹಿಂದುಳಿದ ನಾಯಕ, ಮಾಜಿ ಸಿಎಂ, ದಿವಂಗತ ಎಸ್.ಬಂಗಾರಪ್ಪರ 88ನೇ ವರ್ಷದ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅತ್ಯಂತ ಅಭಿಮಾನದಿಂದ ಆಚರಿಸುತ್ತಿದ್ದಾರೆ.
ಮಾಜಿ ಸಿಎಂ ಬಂಗಾರಪ್ಪ 88ನೇ ಹುಟ್ಟು ಹಬ್ಬ: ಪುತ್ರ ಕುಮಾರ ಬಂಗಾರಪ್ಪರಿಂದ ಪೂಜೆ - ಶಾಸಕ ಕುಮಾರ ಬಂಗಾರಪ್ಪ
ಮಾಜಿ ಸಿಎಂ, ದಿವಂಗತ ಎಸ್.ಬಂಗಾರಪ್ಪ 88ನೇ ವರ್ಷದ ಹುಟ್ಟುಹಬ್ಬವನ್ನು ಸೊರಬ ಶಾಸಕ ಕುಮಾರ ಬಂಗಾರಪ್ಪ ಇಂದು ಸೊರಬದ ಬಂಗಾರಧಾಮದಲ್ಲಿ ಇರುವ ಬಂಗಾರಪ್ಪ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿ ಆಚರಿಸಿದರು.
ಮಾಜಿ ಸಿಎಂ ಬಂಗಾರಪ್ಪ ಹುಟ್ಟು ಹಬ್ಬ
ಬಂಗಾರಪ್ಪ ಪುತ್ರ ಸೊರಬ ಶಾಸಕ ಕುಮಾರ ಬಂಗಾರಪ್ಪ ಇಂದು ಸೊರಬದ ಬಂಗಾರಧಾಮದಲ್ಲಿ ಇರುವ ಬಂಗಾರಪ್ಪ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಬಂಗಾರಪ್ಪ ಉದ್ಯಾನವನದಲ್ಲಿನ ಬಂಗಾರಪ್ಪ ಪುತ್ಥಳಿಗೆ ಪೂಜೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಜಿಲ್ಲಾ ಈಡಿಗರ ಸಭಾಭವನದಲ್ಲಿ ಜಿಲ್ಲಾ ಈಡಿಗ ಸಮಾಜದ ವತಿಯಿಂದ ಬಂಗಾರಪ್ಪ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಈ ವೇಳೆ ಬಂಗಾರಪ್ಪ ಅಭಿಮಾನಿಗಳು ಹಾಜರಿದ್ದರು.