ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಇಂದು 88 ಜನ ಸೋಂಕಿತರು ಪತ್ತೆ: ಮಂಗಳೂರಿನಲ್ಲಿ ಮೂವರು ಬಲಿ - managalore corona news toady

ಇಂದು ಜಿಲ್ಲೆಯಲ್ಲಿ 153 ಜನ ಗುಣಮುಖರಾಗಿದ್ದಾರೆ. ಇದುವರೆಗೂ 17,606 ಜನ ಗುಣಮುಖರಾದಂತಾಗಿದೆ. ಈವರೆಗೂ ಕೊರೊನಾಗೆ ಬಲಿಯಾದವರ ಸಂಖ್ಯೆ 337ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 802 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

covid
ಕೋವಿಡ್

By

Published : Oct 22, 2020, 10:43 PM IST

ಶಿವಮೊಗ್ಗ/ಮಂಗಳೂರು:ಶಿವಮೊಗ್ಗದಲ್ಲಿಇಂದು 88 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಮಂಗಳೂರಿನಲ್ಲಿ ಕೋವಿಡ್​ನಿಂದ ಮೂವರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 653ಕ್ಕೆ ಏರಿಕೆಯಾಗಿದೆ.

ಇಂದು ಜಿಲ್ಲೆಯಲ್ಲಿ 153 ಜನ ಗುಣಮುಖರಾಗಿದ್ದಾರೆ. ಇದುವರೆಗೂ 17,606 ಜನ ಗುಣಮುಖರಾದಂತಾಗಿದೆ. ಈವರೆಗೂ ಕೊರೊನಾಗೆ ಬಲಿಯಾದವರ ಸಂಖ್ಯೆ 337ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 802 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ-40, ಭದ್ರಾವತಿ-10, ಶಿಕಾರಿಪುರ-15, ತೀರ್ಥಹಳ್ಳಿ-03, ಸೊರಬ-07, ಸಾಗರ-09, ಹೊಸನಗರ- 02, ಬೇರೆ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ಇಬ್ಬರು ಸೋಂಕಿತರು ಆಗಮಿಸಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 18,730ಕ್ಕೆ ಏರಿಕೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 154 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈವರೆಗೆ 28,936 ಮಂದಿಗೆ ಕೊರೊನಾ ದೃಢಪಟ್ಟಿದೆ. 248 ಮಂದಿ ಗುಣಮುಖರಾಗಿದ್ದು ಈವರೆಗೆ 25,535 ಮಂದಿ ಗುಣಮುಖರಾಗಿದ್ದಾರೆ. 2,748 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 9,088 ಮಾಸ್ಕ್ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 10,37,205 ರೂ. ದಂಡ ವಸೂಲಿ ಮಾಡಲಾಗಿದೆ.

ABOUT THE AUTHOR

...view details