ಕರ್ನಾಟಕ

karnataka

ETV Bharat / state

ಪ್ರತ್ಯೇಕ ಪ್ರಕರಣ: 85 ಗಾಂಜಾ ಗಿಡ ವಶ, ಮೂವರ ಬಂಧನ - ಗಾಂಜಾ ಗಿಡ

ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಸುಮಾರು 85 ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ.

ಗಾಂಜಾ ಬೆಳೆಗಾರರ ಬಂಧನ
ಗಾಂಜಾ ಬೆಳೆಗಾರರ ಬಂಧನ

By

Published : Sep 13, 2020, 7:24 AM IST

Updated : Sep 13, 2020, 7:54 AM IST

ಶಿವಮೊಗ್ಗ:ಶಿಕಾರಿಪುರ ಗ್ರಾಮಾಂತರ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಪ್ರತ್ಯೇಕ ಪ್ರಕರಣಗಳಲ್ಲಿ 85 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು, ಮೂವರನ್ನು ಬಂಧಿಸಿದ್ದಾರೆ‌.

ಗಾಂಜಾ ಬೆಳೆಗಾರರ ಬಂಧನ

ಮಾಸ್ತಿಬೈಲು ಗ್ರಾಮದ ಶಿವು (31) ಹಾಗೂ ಮಂಜಪ್ಪ(40) ಬಂಧಿತರು. ಇವರು ತಮ್ಮ ಜಮೀನಿನಲ್ಲಿ 35 ಹಸಿ ಗಾಂಜಾ ಬೆಳೆದಿದ್ದರು. ಇನ್ನು ದೇವರಹಳ್ಳಿ ಗ್ರಾಮದ ಬಾಬು (55) ಎಂಬಾತ ತನ್ನ ಜಮೀನಿನಲ್ಲಿ ಬೆಳೆದಿದ್ದ 50 ಗಾಂಜಾ ಗಿಡವನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಮೂವರ ವಿರುದ್ದ ಎನ್​ಡಿಪಿಎಸ್​ ಕಾನೂನಿನಡಿ ಪ್ರಕರಣ ದಾಖಲಿಸಲಾಗಿದೆ.

Last Updated : Sep 13, 2020, 7:54 AM IST

ABOUT THE AUTHOR

...view details