ಶಿವಮೊಗ್ಗ: ಮೂರು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕಾರಿಪುರ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ತೋಟ ಹಾಗೂ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿಕಾರಿಪುರ ಗ್ರಾ.ಪೊಲೀಸರ ಕಾರ್ಯಾಚರಣೆ: 70 ಗಾಂಜಾ ಗಿಡ ವಶಕ್ಕೆ - shikaripura rural police
ಶಿಕಾರಿಪುರ ಗ್ರಾಮಾಂತರ ಪೊಲೀಸರು ವಿವಿಧೆಡೆ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಜಮೀನಿನಲ್ಲಿ ಬೆಳೆದಿದ್ದ 70 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
Arrest
ಶಿಕಾರಿಪುರ ತಾಲೂಕು ಎ.ಅಣ್ಣಾಪುರ ಗ್ರಾಮದ ಗಣಪತಪ್ಪ (55) ಅವರ ಜಮೀನಿನಲ್ಲಿ 49 ಹಸಿ ಗಾಂಜಾ ಗಿಡಗಳು, ಅಶೋಕ್ (36) ಅವರ ಅಡಿಕೆ ತೋಟದಲ್ಲಿ 14 ಹಸಿ ಗಾಂಜಾ ಗಿಡಗಳು ಹಾಗೂ ಮಂಜಪ್ಪ (50) ಎಂಬುವರ ಜಮೀನಿನಲ್ಲಿ 7 ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ.
ಮೇಲಿನ ಮೂರು ಪ್ರಕರಣದಲ್ಲಿ ಆರೋಪಿಗಳು ಪರಾರಿಯಾಗಿದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.