ಕರ್ನಾಟಕ

karnataka

ETV Bharat / state

ಶಿವಮೊಗ್ಗದ ವಿವಿಧೆಡೆ 7 ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು - Cosmo Club Shimoga

ಇನ್ನೂ ಸುಮ್ಮನಾಗದ ಕಿಡಿಗೇಡಿಗಳು ಸಾಗರ ರಸ್ತೆಯ‌ ಕಾಸ್ಮೋ ಕ್ಲಬ್ ಮುಂದೆ ನಿಲ್ಲಿಸಿದ ಎರಡು ಬೈಕ್​ಗಳಿಗೆ ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾರೆ..

7 vehicles set on fire in various parts of Shimoga
ಶಿವಮೊಗ್ಗದ ವಿವಿಧೆಡೆ 7 ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

By

Published : Jul 11, 2020, 4:07 PM IST

ಶಿವಮೊಗ್ಗ :ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ತಡರಾತ್ರಿ ಶಿವಮೊಗ್ಗದಲ್ಲಿ‌ ನಡೆದಿದೆ. ನಗರದ ನ್ಯೂ ಮಂಡ್ಲಿ, ಸವಾಯಿಪಾಳ್ಯ, ಇಲಿಯಾಜ್ ನಗರದಲ್ಲಿ ಒಂದು ಲಾರಿ ಹಾಗೂ ಎರಡು ಬೈಕ್​​​ಗಳಿಗೆ ಬೆಂಕಿ ಹಚ್ಚಿದ್ದಾರೆ.

ಶಿವಮೊಗ್ಗದ ವಿವಿಧೆಡೆ 7 ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಅಲ್ಲದೆ ಸೀಗೆಹಟ್ಟಿಯ ಬಡಾವಣೆಯಲ್ಲಿ ಒಂದು ಕಾರು ಹಾಗೂ ಒಂದು ಬೈಕ್​​ಗೆ ಬೆಂಕಿ ಹಚ್ಚಲಾಗಿದೆ. ಇನ್ನೂ ಸುಮ್ಮನಾಗದ ಕಿಡಿಗೇಡಿಗಳು ಸಾಗರ ರಸ್ತೆಯ‌ ಕಾಸ್ಮೋ ಕ್ಲಬ್ ಮುಂದೆ ನಿಲ್ಲಿಸಿದ ಎರಡು ಬೈಕ್​ಗಳಿಗೆ ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾರೆ. ಈ ಕುರಿತು ದೊಡ್ಡಪೇಟೆ, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details