ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 47 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ19,055ಕ್ಕೆ ಏರಿಕೆಯಾಗಿದೆ.
ಶಿವಮೊಗ್ಗದಲ್ಲಿ ಇಂದು 47 ಜನ ಸೋಂಕಿತರು ಪತ್ತೆ: 37 ಜನ ಗುಣಮುಖ - ಕೊರೊನಾ ಸುದ್ಧಿ
ಶಿವಮೊಗ್ಗದಲ್ಲಿ ಇಂದು 47 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ19,055ಕ್ಕೆ ಏರಿಕೆಯಾಗಿದೆ.
ಇಂದು 37 ಜನ ಗುಣಮುಖರಾಗಿದ್ದು, ಇದುವರೆಗೂ 18,262 ಸೋಂಕಿತರು ಗುಣಮುಖರಾಗಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ. ಇದುವರೆಗೂ ಜಿಲ್ಲೆಯಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 343 ಇದೆ. ಸದ್ಯ ಜಿಲ್ಲೆಯಲ್ಲಿ 471 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಂಟೈನ್ಮೆಂಟ್ ಜೋನ್ ಸಂಖ್ಯೆ 7,129 ಏರಿಕೆಯಾಗಿದೆ. ಇದರಲ್ಲಿ 5,335 ಜೋನ್ ವಿಸ್ತರಣೆಯಾಗಿದೆ.
ಶಿವಮೊಗ್ಗ-20, ಭದ್ರಾವತಿ-06, ಶಿಕಾರಿಪುರ-02, ತೀರ್ಥಹಳ್ಳಿ-04, ಸೊರಬ-08 ಸಾಗರ-05, ಹೊಸನಗರ ತಾಲೂಕಿನಲ್ಲಿ- 02 ಪ್ರಕರಣಗಳು ಪತ್ತೆಯಾಗಿವೆ. ಇಂದು ಜಿಲ್ಳೆಯಲ್ಲಿ 2,588 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 2,490 ಜನರ ವರದಿ ಬಂದಿದೆ.