ತುಮಕೂರು/ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 43 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ18,965 ಕ್ಕೆ ಏರಿಕೆಯಾಗಿದೆ. ಇಂದು 92 ಜನ ಗುಣಮುಖರಾಗಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಇದುವರೆಗೂ 18,126 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇಂದು ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 343ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 511 ಜನ ಚಿಕಿತ್ಸೆಯಲ್ಲಿದ್ದಾರೆ.
ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 81 ಜನ, ಕೋವಿಡ್ ಕೇರ್ ಸೆಂಟರ್ನಲ್ಲಿ 2, ಖಾಸಗಿ ಆಸ್ಪತ್ರೆಯಲ್ಲಿ 68, ಮನೆಯಲ್ಲಿ 352 ಜನ ಐಸೋಲೇಷನ್ ನಲ್ಲಿದ್ದಾರೆ. ಆರ್ಯುವೇದ ಆಸ್ಪತ್ರೆಯಲ್ಲಿ 8 ಜನರಿದ್ದಾರೆ.
ತಾಲೂಕುವಾರು ಸೋಂಕಿತರ ಸಂಖ್ಯೆ: ಶಿವಮೊಗ್ಗ-15, ಭದ್ರಾವತಿ-03, ಶಿಕಾರಿಪುರ-03, ತೀರ್ಥಹಳ್ಳಿ-01, ಸೊರಬ-05, ಸಾಗರ-05, ಹೊಸನಗರ- 01, ಬೇರೆ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ಬೇರೆ ಜಿಲ್ಲೆಯಿಂದ ಯಾರು ಆಗಮಿಸಿಲ್ಲ. ಇಂದು ಜಿಲ್ಳೆಯಲ್ಲಿ 2,735 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 2,366 ಜನರ ವರದಿ ಬಂದಿದೆ.