ಕರ್ನಾಟಕ

karnataka

ETV Bharat / state

ಶೋಕಿಗಾಗಿ ಸೈಲೆನ್ಸರ್ ಬಳಸುವವರಿಗೆ ಶಾಕ್... 41 ಬುಲೆಟ್ ಬೈಕ್​ ಪೊಲೀಸ್​ ವಶಕ್ಕೆ - ಶಿವಮೊಗ್ಗ ಸಂಚಾರಿ ಪೊಲೀಸರು

ಶೋಕಿಗಾಗಿ ಶಬ್ದ ಮಾಲಿನ್ಯ ಮಾಡುತ್ತಿದ್ದವರಿಗೆ ಪೊಲೀಸರಿಂದ ಶಾಕ್. 41 ಬೈಕ್​ಗಳನ್ನು ವಶಕ್ಕೆ ಪಡೆದ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸರು.

ಶೋಕಿಗಾಗಿ ಕರ್ಕಶ ಶಬ್ದದ ಸೈಲೆನ್ಸರ್ ಬಳಕೆ: 41 ಬೈಕ್​ಗಳು ಪೊಲೀಸ್​ ವಶಕ್ಕೆ

By

Published : Jul 30, 2019, 9:11 PM IST

ಶಿವಮೊಗ್ಗ: ಶೋಕಿಗಾಗಿ ಕರ್ಕಶ ಶಬ್ದವನ್ನುಂಟು ಮಾಡುವ ಸೈಲೆನ್ಸರ್ ಹಾಕಿಕೊಂಡು ಓಡಾಡುತ್ತಿದ್ದವರ 41 ಬೈಕ್​ಗಳನ್ನು ಪಶ್ಚಿಮ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಶ್ಚಿಮ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಬುಲೆಟ್ ಬೈಕ್​ಗಳನ್ನು ತಡೆದು ಪರಿಶೀಲನೆ ನಡೆಸಿ, 41 ಬೈಕ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶೋಕಿಗಾಗಿ ಹಾಗೂ ಎಲ್ಲರ ಗಮನ ಸೆಳೆಯಲು ಬುಲೆಟ್ ಬೈಕ್​ಗಳಿಗೆ ವಿವಿಧ ರೀತಿಯ ಶಬ್ದ ಹೊರಹಾಕುವ ಸೈಲೆನ್ಸರ್​ಗಳನ್ನು ಹಾಕಿಕೊಂಡು ಜನನಿಬಿಡ ರಸ್ತೆಯಲ್ಲಿ ಓಡಾಡುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರು. ಅಲ್ಲದೇ ಶಾಲಾ- ಕಾಲೇಜುಗಳ ಬಳಿಯೂ ಶಬ್ದ ಮಾಲಿನ್ಯ ಉಂಟು ಮಾಡುತ್ತಿದ್ದರು.

ಕರ್ಕಶ ಶಬ್ದಗಳನ್ನು ಹೊರಹಾಕುವ ಸೈಲೆನ್ಸರ್​ಗಳನ್ನು ಬಿಚ್ಚಿ ಸಾಮಾನ್ಯ ಸೈಲೆನ್ಸರ್ ಹಾಕಿಕೊಂಡು ಹೋಗಲು ಬೈಕ್ ಮಾಲೀಕರಿಗೆ ಪೊಲೀಸರು ತಿಳಿಸಿ ದಂಡ ವಿಧಿಸಿದ್ದಾರೆ. ಅಲ್ಲದೇ ಬೈಕ್ ಮೆಕ್ಯಾನಿಕ್​ಗಳಿಗೂ ಸಹ ಈ ರೀತಿಯ ಸೈಲೆನ್ಸರ್​ಗಳನ್ನು ಅಳವಡಿಸದಂತೆ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details