ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿಂದು 4 ಕೊರೊನಾ ಕೇಸ್​ ಪತ್ತೆ - corona updates in karnataka

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 4 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು‌ ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ.

4 Corona Positive in Shimoga
ಶಿವಮೊಗ್ಗದಲ್ಲಿಂದು 4 ಕೊರೊನಾ ಪಾಸಿಟಿವ್ ದೃಢ

By

Published : Jun 8, 2020, 8:17 PM IST

ಶಿವಮೊಗ್ಗ: ಇಂದು ಜಿಲ್ಲೆಯಲ್ಲಿ ಮತ್ತೆ 4 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, P-5475, P-5476, P-5477 ಹಾಗೂ P-5478 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. P- 5477, 9 ವರ್ಷದ ಹೆಣ್ಣು ಮಗುವಿಗೂ ಪಾಸಿಟಿವ್ ಬಂದಿದೆ.

ಶಿವಮೊಗ್ಗದಲ್ಲಿಂದು 4 ಕೊರೊನಾ ಪಾಸಿಟಿವ್ ದೃಢ

ಇವರೆಲ್ಲಾ ಮುಂಬೈನಿಂದ ಜೂನ್ 5ರಂದು ಶಿವಮೊಗ್ಗಕ್ಕೆ ಆಗಮಿಸಿದ್ದರು. ಇವರೆನ್ನೆಲ್ಲಾ ಶಿವಮೊಗ್ಗದಲ್ಲಿಯೇ ಕ್ವಾರಂಟೈನ್ ಮಾಡಿ ಗಂಟಲು ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಎಲ್ಲರ ವರದಿಯೂ ಪಾಸಿಟಿವ್ ಬಂದಿದೆ.

ನಾಲ್ಕು ಜನರನ್ನು ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು‌ 69 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಒಟ್ಟು‌ 8 ಕಂಟೈನ್ಮೆಂಟ್ ಝೋನ್​​ಗಳಿವೆ.

ABOUT THE AUTHOR

...view details