ಶಿವಮೊಗ್ಗ :ನಗರದ ಹೊರವಲಯದ ಮಲವಗೊಪ್ಪ ಶ್ರೀ ಚನ್ನಬಸವೇಶ್ವರ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದವನನ್ನು ಸ್ಥಳೀಯರೇ ಹಿಡಿದು ಪೊಲೀಸರ ವಶಕ್ಕೊಪ್ಪಿಸಿದ್ದಾರೆ.
ಬಾಗಿಲು ಮೀಟಿ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ನಾಲ್ವರಲ್ಲಿ ಓರ್ವ ಅಂದರ್.. - ಶ್ರೀ ಚನ್ನಬಸವೇಶ್ವರ ದೇವಾಲಯ
ತಡರಾತ್ರಿ ನಾಲ್ವರು ಕಳ್ಳರು ದೇವಾಲಯದ ಮುಂದಿನ ಬಾಗಿಲ ಗ್ರಿಲ್ ಮುರಿದು ಒಳ ನುಗ್ಗಿದ್ದಾರೆ. ಇದನ್ನು ಗಮನಿಸಿದ ದೇವಾಲಯದ ಅರ್ಚಕ ಕೂಡಲೇ ಸ್ಥಳೀಯರಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಳ್ಳನನ್ನು ಹಿಡಿಯಲು ಮುಂದಾದ ಸ್ಥಳೀಯರ ಕೈಗೆ ಓರ್ವ ಮಾತ್ರ ಸಿಕ್ಕಿಬಿದ್ದಿದ್ದಾನೆ..
ದೇವಾಲಯ
ತಡರಾತ್ರಿ ನಾಲ್ವರು ಕಳ್ಳರು ದೇವಾಲಯದ ಮುಂದಿನ ಬಾಗಿಲ ಗ್ರಿಲ್ ಮುರಿದು ಒಳ ನುಗ್ಗಿದ್ದಾರೆ. ಇದನ್ನು ಗಮನಿಸಿದ ದೇವಾಲಯದ ಅರ್ಚಕ ಕೂಡಲೇ ಸ್ಥಳೀಯರಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಳ್ಳನನ್ನು ಹಿಡಿಯಲು ಮುಂದಾದ ಸ್ಥಳೀಯರ ಕೈಗೆ ಓರ್ವ ಮಾತ್ರ ಸಿಕ್ಕಿಬಿದ್ದಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತುಂಗಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.