ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿಂದು 333 ಕೊರೊನಾ ಸೋಂಕಿತರು ಪತ್ತೆ: 4 ಸಾವು

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 333 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

333 corona confirmed cases in shivamogg
ಇಂದು 333 ಕೊರೊನಾ ಸೋಂಕಿತರು ಪತ್ತೆ

By

Published : Sep 5, 2020, 9:41 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 333 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 9,049ಕ್ಕೆ ಏರಿಕೆಯಾಗಿದೆ. ಇಂದು 342 ಜನ ಗುಣಮುಖರಾಗಿದ್ದಾರೆ. ಇದುವರೆಗೂ 6,218 ಜನ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಇಂದು 333 ಕೊರೊನಾ ಸೋಂಕಿತರು ಪತ್ತೆ

ಜಿಲ್ಲೆಯಲ್ಲಿ ನಾಲ್ವರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 155ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 2,180 ಸಕ್ರಿಯ ಪ್ರಕರಣಗಳಿವೆ.ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 220 ಸೋಂಕಿತರಿದ್ದಾರೆ. ಕೋವಿಡ್ ಕೇರ್ ಸೆಂಟರ್ 221, ಖಾಸಗಿ ಆಸ್ಪತ್ರೆಯಲ್ಲಿ 260, 1,288 ಜನ ಐಸೋಲೇಷನ್​ನಲ್ಲಿದ್ದಾರೆ.

ಇಲ್ಲಿನ ಆರ್ಯುವೇದ ಕಾಲೇಜಿನಲ್ಲಿ 191 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕಂಟೈನ್​ಮೆಂಟ್ ವಲಯಗಳ ಸಂಖ್ಯೆ 4,039ಕ್ಕೆ ಏರಿಕೆಯಾಗಿದೆ. ಇದರಲ್ಲಿ‌ 1,395 ವಲಯ ವಿಸ್ತರಣೆಯಾಗಿದೆ.

ತಾಲೂಕುವಾರು ಸೋಂಕಿತರ ಸಂಖ್ಯೆ

ಶಿವಮೊಗ್ಗ-166

ಭದ್ರಾವತಿ-72

ಶಿಕಾರಿಪುರ-30

ತೀರ್ಥಹಳ್ಳಿ-09

ಸೊರಬ-06

ಸಾಗರ-29

ಹೊಸನಗರ-07

ಬೇರೆ ಜಿಲ್ಲೆಯ 14 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಇಂದು ಜಿಲ್ಳೆಯಲ್ಲಿ 1,634 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 1,221 ಜನರ ವರದಿ ಬಂದಿದೆ.

ABOUT THE AUTHOR

...view details