ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು ಒಂದೇ ದಿನ 327 ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 4084ಕ್ಕೆ ಏರಿಕೆಯಾಗಿದೆ ಮತ್ತು ಸೋಂಕಿನಿಂದ ಮೂವರು ಕೊನೆಯುಸಿರೆಳೆದಿದ್ದಾರೆ.
ಕೊರೊನಾ ಪ್ರಕರಣಗಳು:
ಶಿವಮೊಗ್ಗ ತಾಲೂಕಿನಲ್ಲಿ 144, ಭದ್ರಾವತಿಯಲ್ಲಿ 62, ಶಿಕಾರಿಪುರದಲ್ಲಿ 111, ತೀರ್ಥಹಳ್ಳಿಯಲ್ಲಿ 1, ಹೊಸನಗರದಲ್ಲಿ 3, ಸೊರಬದಲ್ಲಿ 4, ಬೇರೆ ಜಿಲ್ಲೆಯ 2 ಪ್ರಕರಣಗಳು ಸೇರಿದಂತೆ ಒಟ್ಟು 327 ಸೋಂಕು ಪ್ರಕರಣಗಳು ಇಂದು ವರದಿಯಾಗಿದೆ.
ಗುಣಮುಖ:
ಇಂದು 107 ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 2538 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಮೃತ ಪ್ರಕರಣಗಳು:
ಕೊರೊನಾಗೆ ಇಂದು ಮೂವರು ಬಲಿಯಾಗಿದ್ದಾರೆ. ಈವರೆಗೆ ಒಟ್ಟು 71 ಸೋಂಕಿತರು ಸಾವನ್ನಪ್ಪಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಮನೆ ಮಾಡಿದೆ.
ಸಕ್ರಿಯ ಪ್ರಕರಣಗಳು:
ಸದ್ಯ ಜಿಲ್ಲೆಯಲ್ಲಿ 1475 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 233 ಸೋಂಕಿತರು, ಕೋವಿಡ್ ಕೇರ್ ಸೆಂಟರ್ನಲ್ಲಿ 650, ಖಾಸಗಿ ಆಸ್ಪತ್ರೆಯಲ್ಲಿ 229, ಆರ್ಯವೇದಿಕ್ ಕಾಲೇಜಿನಲ್ಲಿ 129 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ 234 ಮಂದಿ ಐಸೋಲೇಷನ್ ಆಗಿದ್ದಾರೆ. ಜಿಲ್ಲೆಯಲ್ಲಿ 1701 ಕಂಟೈನ್ಮೆಂಟ್ ಝೋನ್ ರಚನೆ ಮಾಡಲಾಗಿದೆ.
ಕೋವಿಡ್ ಪರೀಕ್ಷೆ:
ಇಂದು 1337 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 640 ಜನರ ವರದಿ ಬಂದಿದೆ. ಈವರೆಗೆ 40,531 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 32,933 ಜನರ ವರದಿ ಬಂದಿದೆ..