ಕರ್ನಾಟಕ

karnataka

ETV Bharat / state

ಹೆಚ್ಚಿತು ತೈಲ ಕಳ್ಳರ ಹಾವಳಿ: ರಾತ್ರೋರಾತ್ರಿ 30 ಬೈಕ್​​​ನ ಪೆಟ್ರೋಲ್​ ಕದ್ದ ಖದೀಮರು - ಶಿವಮೊಗ್ಗ ಹೊರವಲಯ ಪುರಲೆ

ಒಂದೇ ಸಲ ಇಷ್ಟೊಂದು ಬೈಕ್​ಗಳ ಪೆಟ್ರೋಲ್ ಕಳ್ಳತನಕ್ಕೆ ಪೊಲೀಸರ ವೈಫಲ್ಯ ಕಾರಣ ಎಂದು ಸ್ಥಳೀಯರು‌ ಆರೋಪಿಸುತ್ತಿದ್ದಾರೆ. ರಾತ್ರಿ ವೇಳೆ ಬೀಟ್ ಬರುವ ಪೊಲೀಸರು ಮುಖ್ಯ ರಸ್ತೆಗಷ್ಟೇ ತಮ್ಮನ್ನು ಸಿಮಿತಗೊಳಿಸಿಕೊಂಡಿದ್ದಾರೆ. ಇದರಿಂದಲೇ ಈ ರೀತಿಯ ಕೃತ್ಯ ಹೆಚ್ಚಾಗಲು ಕಾರಣವಾಗಿದೆ ಎಂದು ಆರೋಪಿಸುತ್ತಿದ್ದಾರೆ.

30-bike-petrol-stolen-at-night-in-shivamogga
ರಾತ್ರೋರಾತ್ರಿ 30 ಬೈಕ್​​​ನ ಪೆಟ್ರೋಲ್​ ಕದ್ದ ಖದೀಮರ

By

Published : Jul 17, 2021, 4:47 PM IST

ಶಿವಮೊಗ್ಗ: ತೈಲ ಬೆಲೆ ಏರಿಕೆಯಾಗುತ್ತಿದ್ದಂತೆ ನಿತ್ಯ ಪೆಟ್ರೋಲ್, ಡೀಸೆಲ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಶಿವಮೊಗ್ಗ ಹೊರವಲಯ ಪುರಲೆ ಬಡಾವಣೆಯಲ್ಲಿನ ಒಕ್ಕಲಿಗರ ಬೀದಿ ಸೇರಿದಂತೆ ಒಟ್ಟು ಮೂರು ಬೀದಿಗಳಲ್ಲಿ 30ಕ್ಕೂ ಅಧಿಕ ಬೈಕ್​ಗಳ ಪೆಟ್ರೋಲ್ ಕಳ್ಳತನವಾಗಿದೆ.

ರಾತ್ರೋರಾತ್ರಿ 30 ಬೈಕ್​​​ನ ಪೆಟ್ರೋಲ್​ ಕದ್ದ ಖದೀಮರ

ಮನೆ ಮುಂದೆಯೇ ನಿಲ್ಲಿಸಿದ್ದ ಬೈಕ್​ಗಳ ಪೆಟ್ರೋಲ್ ಕದಿಯಲಾಗಿದ್ದು, ಬೆಳಗ್ಗೆ ಎದ್ದು ಬೈಕ್​​ ಸ್ಟಾರ್ಟ್ ಮಾಡಿದ್ದ ಮಾಲೀಕರು ಶಾಕ್ ಆಗಿದ್ದಾರೆ. ಪೆಟ್ರೋಲ್​ ತೆಗೆಯಲು ಪೈಪ್​ ಅನ್ನು ಕಟ್ ಮಾಡಿ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಒಂದೇ ಸಲ ಇಷ್ಟೊಂದು ಬೈಕ್​ಗಳ ಪೆಟ್ರೋಲ್ ಕಳ್ಳತನಕ್ಕೆ ಪೊಲೀಸರ ವೈಫಲ್ಯ ಕಾರಣ ಎಂದು ಸ್ಥಳೀಯರು‌ ಆರೋಪಿಸುತ್ತಿದ್ದಾರೆ. ರಾತ್ರಿ ವೇಳೆ ಬೀಟ್ ಬರುವ ಪೊಲೀಸರು ಮುಖ್ಯ ರಸ್ತೆಗಷ್ಟೇ ತಮ್ಮನ್ನು ಸಿಮಿತಗೊಳಿಸಿಕೊಂಡಿದ್ದಾರೆ. ಇದರಿಂದಲೇ ಈ ರೀತಿಯ ಕೃತ್ಯ ಹೆಚ್ಚಾಗಲು ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯರಾದ ಶ್ರೀಧರ್.

ಓದಿ:ಪೊಲೀಸರ ಭರ್ಜರಿ ಕಾರ್ಯಾಚರಣೆ : 2 ಕೋಟಿ ಮೌಲ್ಯದ ಮಾದಕ ವಸ್ತುಗಳು ವಶ, ಇಬ್ಬರ ಬಂಧನ

ABOUT THE AUTHOR

...view details