ಕರ್ನಾಟಕ

karnataka

ETV Bharat / state

ಮನೆ ಓಣಿ ಅಳತೆ ವಿಚಾರವಾಗಿ ಮಾರಣಾಂತಿಕ ಹಲ್ಲೆ: ಐವರಿಗೆ 3 ವರ್ಷ ಕಠಿಣ ಶಿಕ್ಷೆ - ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯ

ಶಿವಮೊಗ್ಗ ತಾಲೂಕು ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಹಾರನಹಳ್ಳಿ ಗ್ರಾಮದಲ್ಲಿ 2015ರಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ನ್ಯಾಯಾಲಯ ಜೈಲು ಶಿಕ್ಷೆ ಪ್ರಕಟಿಸಿದೆ.

3-years-jail-for-five-accused-in-deadly-assault-case
ಮನೆ ಓಣಿ ಅಳತೆ ವಿಚಾರವಾಗಿ ಮಾರಾಣಾಂತಿಕ ಹಲ್ಲೆ: ಐವರಿಗೆ 3 ವರ್ಷ ಕಠಿಣ ಶಿಕ್ಷೆ

By

Published : Jul 2, 2022, 10:49 PM IST

ಶಿವಮೊಗ್ಗ: ಅಕ್ಕ-ಪಕ್ಕದ ಮನೆಯವರ ನಿವೇಶನ ಅಳತೆ ವಿಚಾರದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಐವರಿಗೆ ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯ 3 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.

ಶಿವಮೊಗ್ಗ ತಾಲೂಕು ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಹಾರನಹಳ್ಳಿ ಗ್ರಾಮದಲ್ಲಿ 2015ರಲ್ಲಿ ಸಯ್ಯದ್ ಮಜರ್ ಎಂಬುವರ ಮನೆ ಪಕ್ಕ ಓಣಿ ಅಳತೆ ಮಾಡುವಾಗ ಪಕ್ಕದ‌ ಮನೆಯ ಅತೀಕ್, ಸಿದ್ದಿಕ್, ಶಮ್ಮು, ಫೈರೋಜ್ ಹಾಗೂ ಖಯೂಮ್ ಎಂಬುವರು ಅವಾಚ್ಯ ಶಬ್ದದಿಂದ ಬೈಯ್ದು, ಕುಡಗೋಲು ಮತ್ತು ಮರದ ರೀಫರ್ ಗಳಿಂದ ಹಲ್ಲೆ ನಡೆಸಿದ್ದರು.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಕಾರಣ ಐವರಿಗೂ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗಿದೆ. ಒಂದು ವೇಳೆ ದಂಡ ಕಟ್ಟಲು ವಿಫಲರಾದರೆ 3 ತಿಂಗಳು ಕಾಲ ಸಾದಾ ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಧೀಶ ಮುಸ್ತಫಾ ಹುಸೇನ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ‌. ಸರ್ಕಾರಿ ಅಭಿಯೋಜಕಿ ಪುಷ್ಪ ವಾದ ಮಂಡಿಸಿದ್ದರು.

ಇದನ್ನೂ ಓದಿ:ಆಸ್ತಿ ವಿವಾದ.. ಅತ್ತಿಗೆ, ಮಕ್ಕಳೆದುರೇ ಒಡಹುಟ್ಟಿದ ಅಣ್ಣನನ್ನು ಕೊಚ್ಚಿ ಕೊಂದ ತಮ್ಮಂದಿರು

ABOUT THE AUTHOR

...view details