ಶಿವಮೊಗ್ಗ: ಜಿಲ್ಲೆಯಲ್ಲಿ ಸೋಮವಾರ ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 94 ಕ್ಕೆ ಏರಿಕೆಯಾಗಿದೆ.
ಶಿವಮೊಗ್ಗದಲ್ಲಿ ನಿನ್ನೆ ಮೂವರಿಗೆ ಕೊರೊನಾ ಪಾಸಿಟಿವ್ : ಒಟ್ಟು ಸೋಂಕಿತ ಸಂಖ್ಯೆ 94 ಕ್ಕೆ ಏರಿಕೆ - ಶಿವಮೊಗ್ಗ ಲೆಟೆಸ್ಟ್ ಕೊರೊನಾ ಅಪ್ಡೇಟ್
ಶಿವಮೊಗ್ಗದಲ್ಲಿ ಸೋಮವಾರ ಪತ್ತೆಯಾದ ಮೂರು ಕೊರೊನಾ ಪ್ರಕರಣಗಳು ಸೇರಿದಂತೆ ಒಟ್ಟು ಸೋಂಕಿತರ ಸಂಖ್ಯೆ 94 ಕ್ಕೆ ಏರಿಕೆಯಾಗಿದೆ.
P-7211, P-7212 ಹಾಗೂ P-7213 ಹೊಸದಾಗಿ ಪತ್ತೆಯಾದ ಕೊರೊನಾ ಪ್ರಕರಣಗಳು. P-7211 ಗೆ P-5823 ಸಂಪರ್ಕದಿಂದ, P-7212 ಗೆ P-5824 ನಿಂದ ಹಾಗೂ P-7213 ಗೆ P-5830 ರಿಂದ ಸೊಂಕು ತಗಲಿದೆ ಎಂದು ತಿಳಿದು ಬಂದಿದೆ. ಇವರೆಲ್ಲಾರು ಬೆಂಗಳೂರಿನ ಪಾದರಾಯನಪುರ ಕರ್ತವ್ಯಕ್ಕೆ ತೆರಳಿದ್ದರು ಎನ್ನಲಾಗಿದೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಜಿಲ್ಲೆಯಲ್ಲಿ ಒಟ್ಟು 94 ಕೇಸ್ ಪತ್ತೆಯಾಗಿದ್ದು, ಇಂದು 10 ಮಂದಿ ಸೇರಿದಂತೆ ಒಟ್ಟು 54 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 40 ಜನ ಸಕ್ರೀಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.