ಕರ್ನಾಟಕ

karnataka

ETV Bharat / state

29 ಕೋಟಿ ವಿದ್ಯುತ್​​ ಬಿಲ್ ಬಾಕಿ ಉಳಿಸಿಕೊಂಡಿವೆಯಂತೆ ಸರ್ಕಾರಿ ಇಲಾಖೆಗಳು! - undefined

ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳು ಮೆಸ್ಕಾಂಗೆ ಬರೋಬ್ಬರಿ 29 ಕೋಟಿ ರೂ. ವಿದ್ಯುತ್ ಬಿಲ್ ನಿಡದೆ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ.

29 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ ಸರ್ಕಾರಿ ಇಲಾಖೆಗಳು

By

Published : Jun 10, 2019, 10:12 PM IST

ಶಿವಮೊಗ್ಗ: ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳು ಮೆಸ್ಕಾಂಗೆ ಬರೋಬ್ಬರಿ 29 ಕೋಟಿ ರೂ. ವಿದ್ಯುತ್ ಬಿಲ್ ನಿಡದೆ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ.

29 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ ಸರ್ಕಾರಿ ಇಲಾಖೆಗಳು

ಕಳೆದ ಅನೇಕ ವರ್ಷಗಳಿಂದ ಪಾಲಿಕೆಯೂ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಸ್ಥಳೀಯ ಆಡಳಿತ ಸಂಸ್ಥೆಗಳು ನೀರು ಸರಬರಾಜು, ಬೀದಿ ದೀಪ ಸೇರಿದಂತೆ ಇತರೆ ವಿದ್ಯುತ್ ಬಿಲ್ ಸರಿಯಾಗಿ ಪಾವತಿಸದ ಕಾರಣ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 29 ಕೊಟಿ ರೂ. ಮೆಸ್ಕಾಂ ಬಿಲ್ ಬಾಕಿ ಉಳಿದುಕೊಂಡಿದೆ. ಇದರಲ್ಲಿ ಮಹಾನಗರ ಪಾಲಿಕೆಯೊಂದರಿಂದ 14.74 ಕೋಟಿ ರೂ. ಬಿಲ್ ಬಾಕಿ ಬರಬೇಕಿದೆಯಂತೆ.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಿಂದ 40 ಲಕ್ಷ , ಗ್ರಾಮ ಪಂಚಾಯಿತಿಗಳಿಂದ 13.82 ಕೋಟಿ, ಇತರೆ ಸರ್ಕಾರಿ ಇಲಾಖೆ ಒಳಗೊಂಡಂತೆ ಒಟ್ಟು 29 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ಮೆಸ್ಕಾಂ ಅಧಿಕಾರಿಗಳಿಗೆ ತಲೆನೋವಾಗಿದೆ. ಇವುಗಳನ್ನು ಹೊರತುಪಡಿಸಿ ಏಪ್ರಿಲ್ ತಿಂಗಳ ಅಂತ್ಯಕ್ಕೆ ಕೊನೆಗೊಂಡಂತೆ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಕೆಎಸ್ಆರ್​ಟಿಸಿ ಸೇರಿದಂತೆ 40ಕ್ಕೂ ಅಧಿಕ ಇಲಾಖೆಗಳಿಂದ 89.37 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಬರಬೇಕಿದೆ.

ಇತ್ತೀಚೆಗೆ ಅಗತ್ಯಕ್ಕಿಂತ ಹೆಚ್ಚಾಗಿ ವಿದ್ಯುತ್ ಬಳಕೆಯಾಗುತ್ತಿದೆ. ಆದರೆ, ಬಿಲ್ ಪಾವತಿ ಮಾತ್ರ ಸರಿಯಾಗಿ ಆಗುತ್ತಿಲ್ಲ. ಅದರಲ್ಲಿಯೂ ಸರ್ಕಾರಿ ಕಚೇರಿಗಳಿಂದ ಸಾಕಷ್ಟು ಪ್ರಮಾಣದ ವಿದ್ಯುತ್ ಬಿಲ್ ಬರಬೇಕಿದ್ದು, ಗ್ರಾ.ಪಂಚಾಯಿತಿಗಳು ಹೆಚ್ಚಿನ ಪ್ರಮಾಣದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ರೈಲ್ವೆ, ಬಂದರು, ವಾಣಿಜ್ಯ ಇಲಾಖೆ ಸೇರಿದಂತೆ ಕೆಲವೇ ಬೆರಳೆಣಿಕೆಯಷ್ಟು ಇಲಾಖೆಗಳನ್ನು ಹೊರತುಪಡಿಸಿದರೆ ಬಹುತೇಕ ಇಲಾಖೆಗಳು ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿವೆ.

ಇತ್ತ ಮೆಸ್ಕಾಂ ಅಧಿಕಾರಿಗಳು, ಮೂಲ ಸೌಕರ್ಯಗಳಾದ ನೀರು, ಬೀದಿ ದೀಪಗಳ ವಿದ್ಯುತ್ ಕಡಿತ ಮಾಡಿದರೆ ಜನಜೀವನ ಅಸ್ತವ್ಯಸ್ತವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಸರ್ಕಾರಕ್ಕೆ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಪತ್ರ ಬರೆಯುತ್ತಿದ್ದು, ಬಾಕಿ ಪಾವತಿಸಿಕೊಳ್ಳಲು ಮುಂದಾಗಿದ್ದಾರೆ.

ಸರ್ಕಾರಿ ಇಲಾಖೆಗಳಲ್ಲಿ ಶೇ. 60ರಷ್ಟು ಹಣ ವಿದ್ಯುತ್ ಬಿಲ್‌ಗಾಗಿ ಮೀಸಲಿದ್ದರೂ ಸರ್ಕಾರಿ ಕಚೇರಿಗಳ ನಿರ್ಲಕ್ಷ್ಯದಿಂದ ಕೋಟಿಗಟ್ಟಲೆ ಬಿಲ್ ಬಾಕಿ ಉಳಿದಿದೆ. ಸಾರ್ವಜನಿಕರು ಬಿಲ್ ಪಾವತಿ ಮಾಡದಿದ್ದರೆ ಹೇಳದೆ ಕೇಳದೆ ವಿದ್ಯುತ್ ಕನೆಕ್ಷನ್ ಕಟ್ ಮಾಡುವ ಮೆಸ್ಕಾಂ ಅಧಿಕಾರಿಗಳು, ಸರ್ಕಾರಿ ಕಚೇರಿಗಳಿಂದ ಕೋಟಿಗಟ್ಟಲೆ ಬಿಲ್ ಬಾಕಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details