ಕರ್ನಾಟಕ

karnataka

ETV Bharat / state

ಶಿವಮೊಗ್ಗ ಜಿಲ್ಲೆಯಲ್ಲಿ 7 ಸಾವಿರ ಗಡಿ‌ ದಾಟಿದ ಸೋಂಕಿತರ ಸಂಖ್ಯೆ: ಇಂದೇ 285 ಜನ ಗುಣಮುಖ - ಶಿವಮೊಗ್ಗ ಕೊರೊನಾ ಸುದ್ದಿ

ಇಂದು ಜಿಲ್ಲೆಯಲ್ಲಿ ಕೊರೊನಾದಿಂದ 285 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Shivmogga
Shivmogga

By

Published : Aug 29, 2020, 9:34 PM IST

ಶಿವಮೊಗ್ಗ:ಜಿಲ್ಲೆಯಲ್ಲಿ ಇಂದು 244 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ ಇದೀಗ 7,175ಕ್ಕೆ ಏರಿಕೆಯಾಗಿದೆ.

ಇಂದು 285 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೂ 4,984 ಜನ ಗುಣಮುಖರಾಗಿದ್ದಾರೆ,. ಜಿಲ್ಲೆಯಲ್ಲಿ 3 ಜನ ಸೋಂಕಿತರು ಬಲಿಯಾಗಿದ್ದು, ಇದುವರೆಗೂ ಜಿಲ್ಲೆಯಲ್ಲಿ 123 ಜನ ಸಾವನ್ನಪ್ಪಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1,577 ಜನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಮೆಗ್ಗಾನ್ ಕೋವಿಡ್ ಅಸ್ಪತ್ರೆಯಲ್ಲಿ 200 ಜನ, ಕೋವಿಡ್ ಕೇರ್ ಸೆಂಟರ್​​ನಲ್ಲಿ 284 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 174 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ 830 ಜನ ಐಸೋಲೇಷನ್​​ನಲ್ಲಿದ್ದಾರೆ. ಆರ್ಯವೇದಿಕ್ ಕಾಲೇಜಿನಲ್ಲಿ 913 ಜನ ಇದ್ದಾರೆ.

ತಾಲೂಕುವಾರು ಸೊಂಕಿತರ ವಿವರ
ಶಿವಮೊಗ್ಗ-125, ಭದ್ರಾವತಿ-58, ಶಿಕಾರಿಪುರ-35, ತೀರ್ಥಹಳ್ಳಿ-04, ಸೊರಬ-09,
ಸಾಗರ-05, ಹೊಸನಗರ-04 ಹಾಗೂ ಬೇರೆ ಜಿಲ್ಲೆಯ 04 ಜನ ಸೋಂಕಿತರು

ಇಂದು ಜಿಲ್ಲೆಯಲ್ಲಿ 1,231 ಜನರಿಗೆ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 699 ಜನರ ವರದಿ ಬಂದಿದೆ.

ABOUT THE AUTHOR

...view details