ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿಂದು 242 ಜನ ಸೋಂಕಿತರು ಪತ್ತೆ: 191 ಜನ ಗುಣಮುಖ - Shimoga corona latest news

ಜಿಲ್ಲೆಯಲ್ಲಿ ಇಂದು ಎಷ್ಟು ಜನರಿಗೆ ಕೊರೊನಾ ಸೋಂಕು ತಗುಲಿದೆ. ಎಷ್ಟು ಜನರು ಗುಣಮುಖರಾಗಿದ್ದಾರೆ ಎಂಬುದರ ಕುರಿತ ಮಾಹಿತಿ ಇಂತಿದೆ‌.

Shimoga
Shimoga

By

Published : Oct 1, 2020, 8:11 PM IST

Updated : Oct 1, 2020, 8:32 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 242 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ತಾಲೂಕುವಾರು ಸೊಂಕಿತರ ಸಂಖ್ಯೆ:

ಶಿವಮೊಗ್ಗ-88, ಭದ್ರಾವತಿ-48, ಶಿಕಾರಿಪುರ-44, ತೀರ್ಥಹಳ್ಳಿ-09, ಸೊರಬ-18, ಸಾಗರ-09, ಹೊಸನಗರ-12, ಬೇರೆ ಜಿಲ್ಲೆಯಿಂದ ಬಂದಿದ್ದ 14 ಜನರಿಗೂ ಸೋಂಕು ತಗುಲಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15,328 ಕ್ಕೆ ಏರಿಕೆಯಾಗಿದೆ.

ಗುಣಮುಖದವರ ವಿವರ :

ಜಿಲ್ಲೆಯಲ್ಲಿ ಈ ದಿನ 191 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದಾರೆ. ಇದುವರೆಗೆ ಒಟ್ಟು 13,021 ಜನ ಗುಣಮುಖರಾಗಿದ್ದಾರೆ.

ಮೃತರಿಷ್ಟು :

ಜಿಲ್ಲೆಯಲ್ಲಿಂದು 04 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 297 ಕ್ಕೆ ಏರಿಕೆಯಾಗಿದೆ.

ಸಕ್ರಿಯ ಪ್ರಕರಣ ಮಾಹಿತಿ :

ಸದ್ಯ ಜಿಲ್ಲೆಯಲ್ಲಿ 2,070 ಜನ ಚಿಕಿತ್ಸೆಯಲ್ಲಿದ್ದಾರೆ. ಅದರಲ್ಲಿ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 142 ಜನ ಸೋಂಕಿತರಿದ್ದಾರೆ. ಕೋವಿಡ್ ಕೇರ್ ಸೆಂಟರ್ ನಲ್ಲಿ 186 ಜನ ಇದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 299 ಜನ ಇದ್ದಾರೆ. ಮನೆಯಲ್ಲಿ 1284 ಜನ ಐಸೋಲೇಷನ್ ನಲ್ಲಿದ್ದಾರೆ. ಆರ್ಯುವೇದ ಕಾಲೇಜಿನಲ್ಲಿ 159 ಜನ ಇದ್ದಾರೆ.

ಕೋವಿಡ್ ಪರೀಕ್ಷೆ :

ಇಂದು ಜಿಲ್ಲೆಯಲ್ಲಿ 3,486 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 3,089 ಜನರ ವರದಿ ಬಂದಿದೆ.

ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಝೋನ್ ಸಂಖ್ಯೆ 6490 ಏರಿಕೆ ಹಾಗಿದೆ. ಇದರಲ್ಲಿ‌ 3608 ಝೋನ್ ವಿಸ್ತರಣೆಯಾಗಿದೆ.

Last Updated : Oct 1, 2020, 8:32 PM IST

ABOUT THE AUTHOR

...view details