ಶಿವಮೊಗ್ಗ:ಜಿಲ್ಲೆಯಲ್ಲಿ ದಿನೆ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು, ಅದರಂತೆ ಅಂತರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬಂದವರು ಹಾಗೂ ಸೋಂಕಿತರಿಂದ ಇಂದು ಮತ್ತೆ 23 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.
ಶಿವಮೊಗ್ಗದಲ್ಲಿ ಇಂದು 23 ಜನರಿಗೆ ಕೊರೊನಾ ಸೋಂಕು - Corona Latest News
ಮಲೆನಾಡಲ್ಲಿ ಕೊರೊನಾ ಆರ್ಭಟ ಮುಂದುವರಿದಿದೆ. ಇಂದೂ ಸಹ 23 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 222ಕ್ಕೆ ಏರಿಕೆಯಾಗಿದೆ. ಇದಲ್ಲದೆ ಜಿಲ್ಲೆಯಲ್ಲಿ 101 ಸಕ್ರಿಯ ಪ್ರಕರಣಗಳಿವೆ.
![ಶಿವಮೊಗ್ಗದಲ್ಲಿ ಇಂದು 23 ಜನರಿಗೆ ಕೊರೊನಾ ಸೋಂಕು 23 new corona cases reported in Shivamogga today](https://etvbharatimages.akamaized.net/etvbharat/prod-images/768-512-7883353-91-7883353-1593798652267.jpg)
ಶಿವಮೊಗ್ಗದಲ್ಲಿ ಇಂದು ಮತ್ತೆ 23 ಜನರಿಗೆ ಕೊರೊನಾ ಸೋಂಕು
ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 222 ಕ್ಕೆ ಏರಿಕೆ ಆದಂತಾಗಿದೆ. 222 ಕೊರೊನಾ ಸೋಂಕಿತರಲ್ಲಿ 117 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 101 ಕೊರೊನಾ ಸೋಂಕಿತರು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಒಟ್ಟು 101 ಸಕ್ರಿಯ ಪ್ರಕರಣಗಳಿದ್ದು, 4 ಮಂದಿ ಕೊರೊನಾದಿಂದಾಗಿ ಸಾವನಪ್ಪಿದ್ದಾರೆ.