ಶಿವಮೊಗ್ಗ: ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿಂದು ಒಂದೇ ದಿನ 23 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಸಂಪರ್ಕವಿಲ್ಲದೆ ಇರುವ 8 ಪ್ರಕರಣ, ILI- 9 ಪ್ರಕರಣಗಳು, ಮಹಾರಾಷ್ಟ್ರದಿಂದ ಮರಳಿದ್ದ ಇಬ್ಬರಲ್ಲಿ ಹಾಗೂ ದ್ವಿತೀಯ ಸಂಪರ್ಕದ 4 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಕೊರೊನಾ ವಾರಿಯರ್ಸ್ಗಳಾದ ಆಶಾ ಕಾರ್ಯಕರ್ತೆಯರಿಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಸಿಎಂ ತವರಲ್ಲಿ ಒಂದೇ ದಿನ 23 ಮಂದಿ ಕೊರೊನಾ ಸೋಂಕಿತರು ಪತ್ತೆ - McGann Hospital
ಮಲೆನಾಡಲ್ಲಿಂದು 23 ಪ್ರಕರಣ ದಾಖಲಾಗುವ ಮೂಲಕ ಆತಂಕ ಹೆಚ್ಚಿಸಿದೆ. ಸಂಪರ್ಕಿತರೇ ಇಲ್ಲದ 8 ಪ್ರಕರಣಗಳು ದಾಖಲಾಗಿದ್ದು ಜಿಲ್ಲಾಡಳತಕ್ಕೆ ತಲೆನೋವಾಗಿದೆ. ಅಲ್ಲದೆ ಇದರಲ್ಲಿ ಇಬ್ಬರು ಆಶಾ ಕಾರ್ಯಕರ್ತೆಯರೂ ಸಹ ಸೇರಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ ಸಂಪರ್ಕ ವಿಲ್ಲದೆ ಇರುವ 8 ಪ್ರಕರಣಗಳು ಪತ್ತೆಯಾಗಿರುವುದು ಬೆಚ್ಚಿ ಬಿಳಿಸಿದೆ. ಇದು ಸದ್ಯ ಜಿಲ್ಲಾಡಳಿತಕ್ಕೆ ತಲೆ ನೋವಾಗಿದೆ. ಇಂದಿನ 23 ಪ್ರಕರಣಗಳಿಂದ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 199ಕ್ಕೆ ಏರಿಕೆಯಾಗಿದೆ. ಇಂದು ಆಸ್ಪತ್ರೆಯಿಂದ 8 ಜನ ಬಿಡುಗಡೆಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು 117 ಜನ ಬಿಡುಗಡೆಯಾದಂತೆ ಆಗಿದೆ. ಸದ್ಯ ಆಸ್ಪತ್ರೆಯಲ್ಲಿ 80 ಜನ ಚಿಕಿತ್ಸೆಯಲ್ಲಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ 25 ಕಂಟೇನ್ಮೆಂಟ್ ಝೋನ್ ಮಾಡಲಾಗಿದೆ. ಇಂದು ಅನಾರೋಗ್ಯದಿಂದ ಮೆಗ್ಗಾನ್ಗೆ ದಾಖಲಾಗಿದ್ದ ಕಡೂರು ಮೂಲದ ಶಿಕ್ಷಕ ಕೊರೊನಾದಿಂದಾಗಿ ಮೃತರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾದಿಂದ ಮೂವರು ಮೃತಪಟ್ಟಂತಾಗಿದೆ.