ಶಿವಮೊಗ್ಗ:ಮಾರಣಾಂತಿಕ ಮಂಗನ ಕಾಯಿಲೆಗೆ 22 ಜನ ಬಲಿಯಾದ ಹಿನ್ನೆಲೆ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಮಂಗನ ಕಾಯಿಲೆಗೆ 22 ಜನ ಬಲಿ... ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದ ಜಿಲ್ಲಾಧಿಕಾರಿ - kannada news
ಮಂಗನ ಕಾಯಿಲೆ ಹಿನ್ನೆಲೆ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿ ಕೆ.ಎ.ದಯಾನಂದ.
ಮಾರಣಾಂತಿಕ ಮಂಗನ ಕಾಯಿಲೆ 22 ಜನರನ್ನು ಬಲಿಪಡೆದುಕೊಂಡ ಹಿನ್ನೆಲೆ ಅದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅನೇಕ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಸಹ ಕಾಯಿಲೆಯನ್ನು ಹತೋಟಿಗೆ ತರುವಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯವರು ಮೊದಲು ವೈಫಲ್ಯ ಅನುಭವಿಸಿದರು. ನಂತರದಲ್ಲಿ ಎಚ್ಚೆತ್ತುಕೊಂಡು ಮಂಗನ ಕಾಯಿಲೆಯನ್ನ ನಿಯಂತ್ರಿಸಲಾಗುತ್ತಿದೆ.
ಆದರೂ ಸಾಗರ ತಾಲೂಕು ಅರಳಗೋಡಿನ ಜನರಿಗೆ ಇನ್ನೂ ಆ ಭಯ ದೂರವಾಗಿಲ್ಲ. ಹಾಗಾಗಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ವೈದ್ಯಾಧಿಕಾರಿಗಳೊಂದಿಗೆ ಕೆ.ಎಫ್.ಡಿ ಕಾಯಿಲೆಯ ಬಗ್ಗೆ ವಾಸ್ತವ ಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡು, ಆಸ್ಪತ್ರೆಯಲ್ಲಿನ ರೋಗಿಗಳ ಆರೋಗ್ಯ ವಿಚಾರಿಸಿದರು.