ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮದ ಶುಂಠಿ ಜಮೀನೊಂದರಲ್ಲಿ ಪತ್ತೆಯಾದ ಎರಡು ನಾಗರಹಾವುಗಳು 78 ಮೊಟ್ಟೆಗಳನ್ನು ಇಟ್ಟಿರುವುದನ್ನು ಸಂರಕ್ಷಕ ಸಾಲೂರಿನ ಚೇತನ್ ಕಂಡು ಹಿಡಿದು ಅರಣ್ಯ ಇಲಾಖೆಗೆ ನೀಡಿದ್ದಾರೆ.
ಜಮೀನೊಂದರಲ್ಲಿ 78 ಮೊಟ್ಟೆ ಇಟ್ಟಿದ್ದ 2 ಹಾವುಗಳು! - Kannada news
ಒಂದು ಹಾವು 15-20 ಮೊಟ್ಟೆ ಇಡುವುದು ಸಹಜ. ಆದರೆ ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮದ ಶುಂಠಿ ಜಮೀನೊಂದರಲ್ಲಿ ಎರಡು ಹೆಣ್ಣು ಹಾವು ಒಟ್ಟಿಗೆ ಇದ್ದು, ಒಂದೇ ಸ್ಥಳದಲ್ಲಿ 78 ಮೊಟ್ಟೆ ಇಟ್ಟಿವೆ.
78 ಹಾವಿನ ಮೊಟ್ಟೆಗಳು ಪತ್ತೆ
ಬೆಂಡೆಕಟ್ಟೆ ಗ್ರಾಮದ ಮಂಜುನಾಯ್ಕ ಎಂಬುವರ ಜಮೀನಿನಲ್ಲಿ ದೊಡ್ಡ ನಾಗರಹಾವು ಪದೇ ಪದೇ ಕಾಣುತ್ತಿದ್ದು, ಅದನ್ನು ಹಿಡಿಯುವುದಕ್ಕಾಗಿ ಹಾವು ಸಂರಕ್ಷಕ ಚೇತನ್‌ನನ್ನು ಕರೆಸಿದ್ದರು. ಹಾವು ಇದ್ದ ಸ್ಥಳದಲ್ಲಿ ಹಿಡಿಯಲು ಹೋದಾಗ ಎರಡು ಹಾವು ಪತ್ತೆಯಾಗಿವೆ. ಹಾವು ಹಿಡಿದರೂ ಪುನಃ ತಪ್ಪಿಸಿಕೊಂಡು ಹೋಗುತ್ತಿರುವುದನ್ನು ಕಂಡು ಅನುಮಾನಗೊಂಡು ಸ್ಥಳ ಪರಿಶೀಲನೆ ನಡೆಸಿದಾಗ 78 ಮೊಟ್ಟೆಗಳು ಪತ್ತೆಯಾಗಿವೆ.