ಶಿವಮೊಗ್ಗ:ಸಾಗರ ತಾಲೂಕಿನ ಅಮಟೆಕೊಪ್ಪ ಚೆಕ್ ಪೋಸ್ಟ್ ಬಳಿ ಕಾರಲ್ಲಿ ಪತ್ತೆಯಾಗಿರುವ ಎರಡು ಕೋಟಿ ರೂ. ಹಣವನ್ನ ಫ್ಲೈಯಿಂಗ್ ಸ್ಕ್ವಾಡ್ ವಶಕ್ಕೆ ಪಡೆದಿದೆ.
ಸಾಗರದ ಬಳಿ 2 ಕೋಟಿ ರೂ. ವಶಕ್ಕೆ ಪಡೆದ ಅಧಿಕಾರಿಗಳು - smg money
ಪ್ರಗತಿ ಗ್ರಾಮೀಣ ಬ್ಯಾಂಕ್ನ ಅಸಿಸ್ಟೆಂಟ್ ಮ್ಯಾನೇಜರ್ನಿಂದ ಹಣ ವಶ ಪಡಿಸಿಕೊಂಡ ಅಧಿಕಾರಿಗಳು. ಸರಿಯಾದ ದಾಖಲೆ ಇಲ್ಲದ ಕಾರಣ ನಗದು ಜಪ್ತಿ ಮಾಡಿಕೊಂಡ ಅಧಿಕಾರಿಗಳು.
2 ಕೋಟಿ ರೂ. ವಶಕ್ಕೆ ಪಡೆದ ಅಧಿಕಾರಿಗಳು.
ಪ್ರಗತಿ ಗ್ರಾಮೀಣ ಬ್ಯಾಂಕ್ನ ಅಸಿಸ್ಟೆಂಟ್ ಮ್ಯಾನೇಜರ್ ಹಣವನ್ನು ಖಾಸಗಿ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಆಗ ಚೆಕ್ಟ್ ಪೋಸ್ಟ್ ಬಳಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ತಪಾಸಣೆ ನಡೆಸಿ, ಸರಿಯಾದ ದಾಖಲೆ ಇಲ್ಲದೆ ಇರುವುದರಿಂದ ಎರಡು ಕೋಟಿ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳಕ್ಕೆ ಸಾಗರ ಉಪ ವಿಭಾಗಾಧಿಕಾರಿ ದರ್ಶನ್, ಸಹಾಯಕ ಪೊಲೀಸ್ ಅಧೀಕ್ಷಕ ಯತೀಶ್ ಎನ್. ಭೇಟಿ ನೀಡಿ ಪರಿಶೀಲನೆ ನಡೆಸಿದರು.
TAGGED:
smg money