ಶಿವಮೊಗ್ಗ: ಕೊರೊನಾ ವೈರಸ್‌ನಿಂದ ಗುಣಮುಖರಾದ 17 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಶಿವಮೊಗ್ಗ ಜನತೆಗೆ ಶುಭ ಸಮಾಚಾರ: ಕೊರೊನಾದಿಂದ 17 ಮಂದಿ ಗುಣಮುಖ - 17 people recovered from corona
ಕೊರೊನಾದಿಂದ ಗುಣಮುಖರಾದವರನ್ನು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಮಾರಕ ರೋಗದ ಆತಂಕಕ್ಕೆ ಒಳಗಾಗಿದ್ದವರಿಗೆ ಸ್ವಲ್ಪಮಟ್ಟಿನ ಸಮಾಧಾನ ಉಂಟಾಗಿದೆ.
ಕೊರೊನಾದಿಂದ ಗುಣಮುಖರಾದ 17 ಜನ
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 41 ಜನರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಇಂದು 17 ಹಾಗೂ ಈ ಹಿಂದೆ 7 ಜನರು ಸೇರಿ ಒಟ್ಟು 24 ಜನರು ಮಹಾಮಾರಿ ವೈರಸ್‌ನಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರ ಪೈಕಿ ಶಿಕಾರಿಪುರದ 1, ಶಿವಮೊಗ್ಗ 4, ಹೊಸನಗರ 3, ಸೊರಬ 2, ಸಾಗರ 1,ತೀರ್ಥಹಳ್ಳಿಯ 6 ಮಂದಿ ಸೇರಿದ್ದಾರೆ.
Last Updated : May 31, 2020, 1:55 PM IST