ಕರ್ನಾಟಕ

karnataka

ETV Bharat / state

ಶಿವಮೊಗ್ಗ: 127 ಮಂದಿಗೆ ಸೋಂಕು, ಇಬ್ಬರು ಬಲಿ - Shimogga corona case

127 ಮಂದಿಗೆ ಸೋಂಕು ದೃಢಪಡುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,603ಕ್ಕೆ ಏರಿಕೆಯಾಗಿದೆ.

Shimogga corona case
Shimogga corona case

By

Published : Jul 29, 2020, 10:40 PM IST

ಶಿವಮೊಗ್ಗ: ಇಂದು ಜಿಲ್ಲೆಯಲ್ಲಿ 127 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 1,603ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಮೃತಪಟ್ಟವರ ಸಂಖ್ಯೆ 28ಕ್ಕೇರಿದೆ. ಆಸ್ಪತ್ರೆಯಿಂದ ಇವತ್ತು 30 ಮಂದಿ ಬಿಡುಗಡೆಗೊಂಡಿದ್ದು, ಈವರೆಗೂ 834 ಜನ ಗುಣಮುಖರಾಗಿದ್ದಾರೆ.

ಸದ್ಯ 741 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 238, ಕೋವಿಡ್ ಕೇರ್ ಸೆಂಟರ್‌ನಲ್ಲಿ 417 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ‌. ಖಾಸಗಿ ಆಸ್ಪತ್ರೆಯಲ್ಲಿ 35 ಹಾಗೂ ಮನೆಯಲ್ಲಿಯೇ 51 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ‌.‌ 362 ಕಡೆಗಳಲ್ಲಿ ಕಂಟೈನ್‌ಮೆಂಟ್‌ ಝೋನ್ ನಿರ್ಮಿಸಲಾಗಿದೆ.

ತಾಲೂಕುವಾರು ಸೋಂಕಿತರ ಸಂಖ್ಯೆ ಹೀಗಿದೆ:
ಶಿವಮೊಗ್ಗ-90
ಭದ್ರಾವತಿ-11
ಸಾಗರ-02
ಶಿಕಾರಿಪುರ-08
ತೀರ್ಥಹಳ್ಳಿ-02
ಹೊಸನಗರ-06
ಸೊರಬ-05

ಜಿಲ್ಲೆಯಲ್ಲಿ 26,300 ಜನರ ಸ್ವಾಬ್ ಸಂಗ್ರಹಿಸಿದ್ದು ಇದರಲ್ಲಿ‌ 24,408 ಜನರ ಫಲಿತಾಂಶ ಬಂದಿದೆ. ಇಂದು 102 ಜನರ ಕಲೆಕ್ಟ್‌ ಮಾಡಲಾಗಿದೆ.

ABOUT THE AUTHOR

...view details