ಕರ್ನಾಟಕ

karnataka

ETV Bharat / state

ಮನೆಗಳ್ಳನ ಬಂಧನ: 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ - Shimogga police

ಶಿವಮೊಗ್ಗದ ವಿದ್ಯಾನಗರದ ವೃದ್ಧೆಯೊಬ್ಬರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಕೋಟೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆರೋಪಿಯಿಂದ 10.33.500 ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಿರಣ್ ಕಳ್ಳತನ ಮಾಡಿದ ಆರೋಪಿ
ಕಿರಣ್ ಕಳ್ಳತನ ಮಾಡಿದ ಆರೋಪಿ

By

Published : Jun 23, 2020, 11:45 PM IST

ಶಿವಮೊಗ್ಗ: ಜಿಲ್ಲೆಯ ಕೋಟೆ ಪೊಲೀಸರು ಮನೆಗಳ್ಳನನ್ನು ಬಂಧಿಸಿದ್ದು, ಆತನಿಂದ 10.33.500 ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗದ ವಿದ್ಯಾನಗರದ ವೃದ್ಧೆಯೊಬ್ಬರ ಮನೆಯಲ್ಲಿ ಕಳ್ಳತನ ನಡೆದಿತ್ತು.

ಕಿರಣ್ ಕಳ್ಳತನ ಮಾಡಿದ ಆರೋಪಿ

ಇವರ ಮನೆಯಲ್ಲಿ 264 ಗ್ರಾಂ ತೂಕದ, 8 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡ ಕೋಟೆ ಠಾಣೆ ಪೊಲೀಸರು ಚಿಕ್ಕಮಗಳೂರು ಜಿಲ್ಲೆ‌ ಕಡೂರಿನ ವೆಂಕಟೇಶ್ವರ ನಗರದ ನಿವಾಸಿ ಕಿರಣ್ (33) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಿದಾಗ ಬಂಧಿತನಿಂದ 287 ಗ್ರಾಂ ತೂಕದ ಚಿನ್ನಾಭರಣ ಸೇರಿದಂತೆ 10,33,500 ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಕೋಟೆ ಠಾಣೆಯ ಸಿಪಿಐ ಮಾದಪ್ಪ, ಪಿಎಸ್ಐಗಳಾದ ಶಿವಾನಂದ‌ ಕೋಳಿ ಹಾಗೂ ರಾಹತ್ ಅಲಿ ಹಾಗೂ ಸಿಬ್ಬಂದಿಗೆ ಎಸ್ಪಿ ಶಾಂತರಾಜು ಅಭಿನಂದನೆ ಸಲ್ಲಿಸಿದ್ದಾರೆ.

ABOUT THE AUTHOR

...view details