ಶಿವಮೊಗ್ಗ:ಶಾಂತಲಾ ಗ್ರೂಪ್ ಆಫ್ ಇಂಡಸ್ಟ್ರಿ ಪ್ರಮೋಟರ್ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ನೇತೃತ್ವದಲ್ಲಿ ಶಾಂತಲಾ ಸ್ಪೇರೋ ಕಾಸ್ಟ್, ಪ್ರಗತಿ ಸ್ಟೀಲ್ ಕ್ಯಾಸ್ಟಿಂಗ್ಸ್ ಸೇರಿದಂತೆ ಶಾಂತಲಾ ಸಮೂಹ ಸಂಸ್ಥೆಗಳ ವತಿಯಿಂದ 10 ಲಕ್ಷ ರೂ.ಗಳ ಚೆಕ್ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಿಲ್ಲಾಧಿಕಾರಿಗಳ ಮೂಲಕ ನೀಡಲಾಯಿತು.
ಶಾಂತಲಾ ಗ್ರೂಪ್ ಆಫ್ ಇಂಡಸ್ಟ್ರಿ ವತಿಯಿಂದ ಸಿಎಂ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ - ಶಾಂತಲಾ ಗ್ರೂಪ್ ಆಫ್ ಇಂಡಸ್ಟ್ರೀ ವತಿಯಿಂದ ಸಿಎಂ ಪರಿಹಾರ ನಿಧಿಗೆ 10 ಲಕ್ಷ. ರೂ ದೇಣಿಗೆ.
ಕೊರೊನಾ ಮಹಾಮಾರಿ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಮುಳುವಾಗಿ ಪರಿಣಮಿಸಿದೆ. ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಿಸುವುದು ಆಯಾ ಸರ್ಕಾರಗಳಿಗೆ ತಲೆನೋವಾಗಿದೆ. ಹೀಗಾಗಿ ಶಕ್ತಿ ಮೀರಿ ತಮ್ಮ ಪ್ರಯತ್ನವನ್ನು ಮಾಡುತ್ತಿವೆ.
ಕೊರೊನಾ ಮಹಾಮಾರಿ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಮುಳುವಾಗಿ ಪರಿಣಮಿಸಿದೆ. ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಿಸುವುದು ಆಯಾ ಸರ್ಕಾರಗಳಿಗೆ ತಲೆನೋವಾಗಿದೆ. ಹೀಗಾಗಿ ಶಕ್ತಿ ಮೀರಿ ತಮ್ಮ ಪ್ರಯತ್ನವನ್ನು ಮಾಡುತ್ತಿವೆ. ಇದರ ನಡುವೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಿಎಂ ಅಥವಾ ಸಿಎಂ ಪರಿಹಾರ ನಿಧಿಗೆ ನೆರವು ನೀಡುವಂತೆ ಉದ್ಯಮಿಗಳು ಹಾಗೂ ಸಾರ್ವಜನಿಕರಲ್ಲಿ ಮನವಿ ಸಹ ಮಾಡಿವೆ.
ಈ ಹಿನ್ನೆಲೆ ಶಿವಮೊಗ್ಗದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ಶಾಂತಲಾ ಗ್ರೂಪ್ ಆಫ್ ಇಂಡಸ್ಟ್ರಿ ವತಿಯಿಂದ ಇಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣವನ್ನು ದೇಣಿಗೆ ನೀಡಲಾಯಿತು. ಈ ಇಂಡಸ್ಟ್ರಿ ವತಿಯಿಂದ ಈ ಹಿಂದೆಯೇ ಸುಮಾರು 26 ಲಕ್ಷ ರೂ.ಗಳನ್ನು ದೇಣಿಗೆ ನೀಡಲಾಗಿತ್ತು.