ರಾಮನಗರ: ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಚಾಕುವಿನಿಂದ ಚುಚ್ಚಿ ಯುವಕನ ಹತ್ಯೆ ಮಾಡಿರುವ ಘಟನೆ ವಿವೇಕಾನಂದ ನಗರದಲ್ಲಿ ನಡೆದಿದೆ.
ಹಣದ ವಿಚಾರ: ಚಾಕುವಿನಿಂದ ಚುಚ್ಚಿ ಯುವಕನ ಹತ್ಯೆ - ramanagara latest news
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೋರ್ವನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಲಾಗಿದೆ.ಈ ಘಟನೆ ವಿವೇಕಾನಂದ ನಗರದಲ್ಲಿ ಜರುಗಿದೆ.
ಚಾಕುವಿನಿಂದ ಚುಚ್ಚಿ ಯುವಕನ ಹತ್ಯೆ
ಹರೀಶ್ (30) ಮೃತ ಯುವಕನಾಗಿದ್ದು, ರಾಮನಗರದ ವಿದ್ಯಾನಗರದ ನಿವಾಸಿಯಾಗಿದ್ದಾನೆ. 18 ಲಕ್ಷ ದುಡ್ಡಿನ ವಿಚಾರವಾಗಿ ಗಲಾಟೆಯಾಗಿದೆ. ಮೈಸೂರು ಮೂಲದ ಪ್ರಕಾಶ್ ಎಂಬುವವರಿಂದ ಹರೀಶ್ ಹಣ ಪಡೆದಿದ್ದನು. ಹಣವನ್ನ ಕೇಳಲು ಹೋಗಿದ್ದ ವೇಳೆ ಮಾತಿನ ಚಕಮಕಿ ನಡೆದು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಮತ್ತೊರ್ವ ಲೋಕೇಶ್ ಎಂಬುವವನಿಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸ್ಥಳಕ್ಕೆ ಐಜೂರು ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.