ಕರ್ನಾಟಕ

karnataka

ETV Bharat / state

ಕನಕಪುರದಲ್ಲಿ ಸಂಕ್ರಾಂತಿ ದಿನ ಹರಿದ ನೆತ್ತರು: ನಡುರಸ್ತೆಯಲ್ಲೇ ಯುವಕನ ಕೊಲೆ - ಕನಕಪುರ ಯುವಕನ ಹತ್ಯೆ

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿ ನಡುರಸ್ತೆಯಲ್ಲೇ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಯುವಕನ  ಕೊಲೆ
ಯುವಕನ ಕೊಲೆ

By

Published : Jan 16, 2022, 9:33 AM IST

ರಾಮನಗರ:ಸಂಕ್ರಾಂತಿ ಹಬ್ಬದ ದಿನವೇ ಊರಲ್ಲಿ ನೆತ್ತರು ಹರಿದಿದೆ. ಮಚ್ಚಿನಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕನಕಪುರ ತಾಲೂಕಿನ ತೇರಿನದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಜಗದೀಶ್ (26) ಕೊಲೆಯಾದ ಯುವಕ. ಈತ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ತೇರಿನದೊಡ್ಡಿ ಗ್ರಾಮದ ನಿವಾಸಿ. ಕ್ಷುಲ್ಲಕ ಕಾರಣಕ್ಕೆ ಗ್ರಾಮದ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು, ಯುವಕನ ತಲೆಗೆ ಮಚ್ಚಿನಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ.

ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ನಡೆಯುತ್ತಿದೆ.

ಇದನ್ನೂ ಓದಿ: ಸದ್ಯದಲ್ಲೇ ಮಹಾಮಾರಿ ಕೋವಿಡ್ ತೊಲಗಲಿದೆ: ಭೀತಿ ಮಧ್ಯೆ ಭರವಸೆ ಮೂಡಿಸಿದ ಅಮೆರಿಕದ ತಜ್ಞ ವೈದ್ಯ

ABOUT THE AUTHOR

...view details