ರಾಮನಗರ:ನಗರದಲ್ಲಿ ರಾಜಕೀಯ ಮುಖಂಡರೊಬ್ಬರು ಹುಟ್ಟುಹಬ್ಬದ ಆಚರಣೆ ವೇಳೆ ಯುವತಿಯರನ್ನು ಕರೆಯಿಸಿ ನೃತ್ಯ ಕಾರ್ಯಕ್ರಮ ಆಯೋಜಿಸಿದ್ದು, ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಬರ್ತ್ ಡೇ ಪಾರ್ಟಿಗೆ ಸಾಕಷ್ಟು ಮಂದಿ ಸೇರಿದ್ದು, ಯುವತಿಯರು ನೃತ್ಯ ಮಾಡಿದ್ದಾರೆ. ಇದೇ ವೇಳೆ ಕೆಲವರು ಡ್ಯಾನ್ಸ್ ಮಾಡುತ್ತಿದ್ದ ಯುವತಿಯರ ಮೇಲೆ ಹಣದ ನೋಟು ಎಸೆದು ಕೇಕೇ ಹಾಕಿದ್ದಾರೆ ಎನ್ನಲಾಗಿದೆ.