ರಾಮನಗರ:ಯುವ ರೈತನೂಬ್ಬ ಪೋನ್ ಮೂಲಕ ಸಚಿವರನ್ನು ಸಂಪರ್ಕಿಸಿ ರೈತನಿಗೆ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲ. ಹಾಗಾಗಿ ರೈತ ಯುವಕರಿಗೆ ಮದುವೆಗೆ ಹೆಣ್ಣು ಸಿಗುವಂತಹ ಕಾಯ್ದೆ ರೂಪಿಸಿ ಎಂದು ಬೇಡಿಕೆ ಸಲ್ಲಿಸಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಪ್ರವಾಸೋದ್ಯಮ ಮತ್ತು ಜೀವಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಮಳವಳ್ಳಿ ಮೂಲದ ಪ್ರವೀಣ್ ಎಂಬ ಯುವ ರೈತ ಪೋನ್ ಮೂಲಕ ಸಂಪರ್ಕ ಮಾಡಿ ಯುವ ರೈತ ಮಕ್ಕಳ ಮದುವೆ ಬವಣೆಯನ್ನು ಬಿಚ್ಚಿಟ್ಟಿದ್ದಾನೆ. ರೈತ ಎಂದರೆ ಸಾಕು ತಮ್ಮ ಹೆಣ್ಣು ಮಕ್ಕಳನ್ನು ಕೊಡಲು ಪೋಷಕರು ಹಿಂಜರಿಯುತ್ತಿದ್ದಾರೆ. ಹಾಗೆ ಹೆಣ್ಣುಗಳು ಕೂಡ ರೈತನನ್ನು ಮದುವೆಯಾಗಲು ಒಪ್ಪುತ್ತಿಲ್ಲ ಎಂದು ತನ್ನ ನೋವನ್ನು ಸಚಿವರ ಬಳಿ ತೊಡಿಕೊಂಡಿದ್ದಾನೆ.