ರಾಮನಗರ:ನಮ್ಮ ಜಮೀನು ಉಳಿಸಿಕೊಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಾಲಿಗೆ ಬಿದ್ದ ಘಟನೆ ಮಾಗಡಿ ತಾಲೂಕಿನ ಚಿಕ್ಕಕಲ್ಯಾ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ ಕೆ ಸುರೇಶ್ ಎದುರೇ ಡಿಸಿ ಕಾಲಿಗೆ ಗ್ರಾಮಸ್ಥರು ಬಿದ್ದು ಮನವಿ ಮಾಡಿದರು. ರಾಮನಗರ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ಕಾಲಿಗೆ ಬಿದ್ದ ಮಹಿಳೆಯರು, ರೈತರು ಉಳುಮೆ ಮಾಡುತ್ತಿದ್ದ 40 ಎಕರೆ ಪ್ರದೇಶವನ್ನ ಶೈಕ್ಷಣಿಕ ಉದ್ದೇಶಕ್ಕಾಗಿ ಜಿಲ್ಲಾಡಳಿತ ವಶಪಡಿಸಿಕೊಂಡಿದೆ.