ರಾಮನಗರ : ನಿತ್ಯ ವ್ಯಾಪಾರ ಮಾಡಿ ಜೀವನಸಾಗಿಸುತ್ತಿದ್ದ ಬಡ ಮಹಿಳೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆಸಿದ್ದು, ಇದೀಗ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಣ್ಣ ಪುಟ್ಟ ದಿನಬಳಕೆ ಫ್ಯಾನ್ಸಿ ವಸ್ತುಗಳನ್ನು ಊರೂರಿಗೆ ತೆರಳಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಬನ್ನಿಕುಪ್ಪೆ ನಿವಾಸಿ ಗೌರಮ್ಮ ಅದೇ ಗ್ರಾಮದ ಕುಮಾರ ಎಂಬಾತ ತನ್ನ ವಸ್ತುಗಳನ್ನು ಕಳ್ಳತನ ಮಾಡಿದ್ದನಂತೆ. ಈ ಕುರಿತು ಪ್ರಶ್ನಿಸಿದಕ್ಕೆ ಕುಪಿತಗೊಂಡ ಕುಮಾರ್ ಆಕೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿ ದರ್ಪ ಮೆರೆದಿದ್ದಾನೆ. ಗೌರಮ್ಮ ಗಂಭೀರ ಗಾಯಗೊಂಡಿದ್ದಾರೆ.
ಇನ್ನು ಹೆದರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ಗೌರಮ್ಮನ ಮೇಲೆ ಕುಮಾರ್ ಪದೇ ಪದೆ ಹಲ್ಲೆ ನಡೆಸಲು ಸಹ ಮುಂದಾಗಿದ್ದಾನೆ. ಹೀಗಾಗಿಯೇ ಕುಮಾರ್ ಮೇಲೆ ಗೌರಮ್ಮ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಊರೂರು ತಿರುಗಿ ದುಡಿದು ಬದುಕುತ್ತಿದ್ದ ಬಡ ಮಹಿಳೆ ಮೇಲೆ ಯುವಕನ ದರ್ಪ ಈ ಸಂಬಂಧ ಪೊಲೀಸರು, ಕುಮಾರ್ ಹಾಗೂ ಆತನ ತಂದೆ ನಾಗರಾಜ್, ತಾಯಿ ಶಿವಮ್ಮ ವಿರುದ್ಧ ಎಫ್ ಐ ಆರ್ ದಾಖಲು ಮಾಡಿ ಬಂಧಿಸಿದ್ದರು. ಆದರೆ, ಈಗಾಗಲೇ ಜಾಮೀನು ಪಡೆದು ಹೋರ ಬಂದಿರುವ ಕುಮಾರ್ ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾನೆ.
ಒಟ್ಟಾರೆ ಕಳ್ಳತನ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಓರ್ವ ಬಡ ಮಹಿಳೆ ಎಂಬುದನ್ನು ನೋಡದೇ ನಡು ಬೀದಿಯಲ್ಲೇ ಹಲ್ಲೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.