ರಾಮನಗರ: ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಕೆರೆ ಬಳಿ ತಂಗಿದ್ದ ಮೂರು ಕಾಡಾನೆಗಳು ಮತ್ತೊಮ್ಮೆ ಪುಂಡಾಟ ನಡೆಸಿ ರೈತರ ಬೆಳೆಗಳನ್ನು ನಾಶಪಡಿಸಿವೆ.
ಬೆಂಗಳೂರು - ಮೈಸೂರು ಹೆದ್ದಾರಿಯ ಕುವೆಂಪು ಕಾಲೇಜು ಮತ್ತು ಅದರ ಪಕ್ಕದಲ್ಲಿರುವ ಅರಣ್ಯ ಇಲಾಖೆಗೆ ಸೇರಿರುವ ಕೆಂಗಲ್ ಹನುಮಂತಯ್ಯ ಥೀಮ್ ಪಾರ್ಕ್ನಲ್ಲಿ ಬೀಡು ಬಿಟ್ಟು ನಂತರ ರೈತರ ತೋಟಗಳಿಗೆ ಲಗ್ಗೆ ಇಟ್ಟಿವೆ. ಕೆಂಗಲ್ನ ರೈತರೊಬ್ಬರ ತೋಟಕ್ಕೆ ನುಗ್ಗಿರುವ ಆನೆಗಳು ತೆಂಗಿನ ಮರ ಸೇರಿದಂತೆ ಹಲವು ಬೆಳೆಗಳನ್ನು ನಾಶಪಡಿಸಿವೆ.
ಈಗಾಗಲೇ ಅರೇಳು ಬಾರಿ ತೋಟಕ್ಕೆ ನುಗ್ಗಿ ಫಸಲು ಹಾಗೂ ಮರ ಮಟ್ಟುಗಳನ್ನು ಆನೆಗಳು ನಾಶ ಪಡಿಸಿದ್ದವು. ಇದೀಗ ಮತ್ತೆ ಹಾಕಿದ್ದ ತೆಂಗಿನ ಗಿಡಗಳು ಹಾಗೂ ಫಸಲು ಹಾಳು ಮಾಡಿವೆ. ಈವರೆಗೂ ತಮಗಾದ ನಷ್ಟಕ್ಕೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ದೊರೆತಿಲ್ಲ. ಈಗ ಮತ್ತದೇ ಸಂಕಷ್ಟವನ್ನು ಗಜಪಡೆ ತಂದಿಟ್ಟಿವೆ ಎಂದು ಅಳಲು ತೋಡಿಕೊಂಡಿದ್ದಾರೆ.