ಕರ್ನಾಟಕ

karnataka

ETV Bharat / state

ರಾಮನಗರ: ಗುಡಿಸಲಿನ ಗೋಡೆ ಕುಸಿದು ಮಹಿಳೆ ಸಾವು - ramangar district news

ಮಳೆಗೆ ನೆನೆದಿದ್ದ ಗೋಡೆ ಕುಸಿದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದರು.

wall-collapse-woman-died-in-channapattana-lambani-tandya
ಮಹಿಳೆ ಸಾವು

By

Published : Nov 8, 2021, 6:51 PM IST

ರಾಮನಗರ: ಗುಡಿಸಲಿನ ಗೋಡೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡ್ಯದಲ್ಲಿ ನಡೆದಿದೆ.

ಗೌರಿಬಾಯಿ (55) ಮೃತ ಮಹಿಳೆ. ಮಳೆಗೆ ನೆನೆದಿದ್ದ ಗುಡಿಸಲಿನ ಗೋಡೆ ಮಹಿಳೆ ಮೇಲೆ ಕುಸಿದು ಬಿದ್ದಿದೆ. ಮುಂಜಾನೆ ಮಲಗಿದ್ದಾಗ ಗೋಡೆ ಮೈಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್​ಗೆ ದಾಖಲು ಮಾಡಲಾಯಿತು. ಆದರೆ ಮೆದುಳು ನಿಷ್ಕ್ರಿಯಗೊಂಡ ಪರಿಣಾಮ ಅವರು ಸಾವನ್ನಪ್ಪಿದ್ದಾರೆ.

ABOUT THE AUTHOR

...view details