ಕರ್ನಾಟಕ

karnataka

ETV Bharat / state

ರಾಮನಗರ: ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ದನಗಳ ಜಾತ್ರೆ ನಡೆಸಿದ ರೈತರು - ಅಯ್ಯನಗುಡಿ ದನಗಳ ಜಾತ್ರೆ

ರಾಮನಗರ ಜಿಲ್ಲಾಡಳಿತದ ಆದೇಶ ಉಲ್ಲಂಘನೆ ಮಾಡಿ ರೈತರು ಚನ್ನಪಟ್ಟಣ ತಾಲೂಕಿನ ಐತಿಹಾಸಿಕ ಕೆಂಗಲ್​ ಆಂಜನೇಯಸ್ವಾಮಿ ದನಗಳ ಜಾತ್ರೆಯನ್ನು ನಡೆಸಿದ್ದಾರೆ.

ಕೆಂಗಲ್​ ಆಂಜನೇಯಸ್ವಾಮಿ ದನಗಳ ಜಾತ್ರೆ
ಕೆಂಗಲ್​ ಆಂಜನೇಯಸ್ವಾಮಿ ದನಗಳ ಜಾತ್ರೆ

By

Published : Jan 20, 2022, 12:49 PM IST

ರಾಮನಗರ: ಕೊರೊನಾ ಅಬ್ಬರದ ಹಿನ್ನೆಲೆ ರಾಮನಗರ ಜಿಲ್ಲಾಡಳಿತ ಜಾತ್ರೆಗಳನ್ನ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಆದರೂ ಸಹ ಚನ್ನಪಟ್ಟಣ ತಾಲೂಕಿನ ಐತಿಹಾಸಿಕ ಕೆಂಗಲ್​ ಆಂಜನೇಯಸ್ವಾಮಿ ದನಗಳ ಜಾತ್ರೆ ಪ್ರಾರಂಭಗೊಂಡಿದ್ದು ನೂರಾರು ರಾಸುಗಳೊಂದಿಗೆ ರಾತ್ರೋರಾತ್ರಿ ಬಂದಿರುವ ರೈತರು, ಜಾತ್ರೆಯ ಮೈದಾನದಲ್ಲಿ ರಾಸುಗಳ ಮಾರಾಟದಲ್ಲಿ ನಿರತರಾಗಿದ್ದಾರೆ.

ಮಕರ ಸಂಕ್ರಾತಿಯ ಮರುದಿನ ಪ್ರತಿವರ್ಷ ಕೆಂಗಲ್​ ದನಗಳ ಜಾತ್ರೆ ನಡೆಯುತ್ತದೆ. ಈ ಭಾಗದಲ್ಲಿ ಅಯ್ಯನಗುಡಿ ದನಗಳ ಜಾತ್ರೆ ಎಂದೇ ಕರೆಯುವ ಈ ಜಾತ್ರೆಯನ್ನು ಕೋವಿಡ್​ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರದ್ದುಪಡಿಸಿತ್ತು. ಆದರೂ ಬ್ರಹ್ಮರಥೋತ್ಸವ ಸೇರಿ ಧಾರ್ಮಿಕ ಕಾರ್ಯಕ್ರಮಗಳನ್ನು ಸಾಂಕೇತಿಕವಾಗಿ ಮಾಡುವ ಮೂಲಕ ರೈತರು ಇಂದು ರಥೋತ್ಸವ ನಡೆಸಿದ್ದಾರೆ.

ಕೆಂಗಲ್​ ಆಂಜನೇಯಸ್ವಾಮಿ ದನಗಳ ಜಾತ್ರೆ

ರಾಸುಗಳನ್ನ ವಾಪಸ್​ ಕಳುಹಿಸಿದ್ದ ಅಧಿಕಾರಿಗಳು:

ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆಯನ್ನು ಜಿಲ್ಲಾಡಳಿತ ನಿಷೇಧಿಸಿದೆ. ಆದ್ದರಿಂದ ಜಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಭಾನುವಾರ ಮತ್ತು ಸೋಮವಾರ ದನಗಳೊಂದಿಗೆ ಬಂದಿದ್ದ ರೈತರನ್ನು ವಾಪಸ್ ಕಳುಹಿಸಿದ್ದರು. ಪೊಲೀಸರು ಕೂಡ ಇದಕ್ಕೆ ಸಹಕರಿಸಿದ್ದರು. ದೇಗುಲದ ಜಾಗದಲ್ಲಿ ಯಾವ ರಾಸುಗಳನ್ನ ಕಟ್ಟಿಸದೆ ಕಟ್ಟುನಿಟ್ಟಿನ ಜಾತ್ರೆಯನ್ನ ಆಚರಿಸಲಾಯಿತು.

ಕೆಂಗಲ್​ ಆಂಜನೇಯಸ್ವಾಮಿ ದನಗಳ ಜಾತ್ರೆ

ನಿಷೇಧದ ನಡುವೆಯೇ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಸೆಡ್ಡು ಹೊಡೆದ ರೈತರು, ಫೋನ್​ನಲ್ಲಿ ಪರಸ್ಪರ ಮಾಹಿತಿ ರವಾನಿಸಿಕೊಂಡು ರಾಸುಗಳೊಂದಿಗೆ ಜಾತ್ರಾ ಸ್ಥಳಕ್ಕೆ ಬಂದಿದ್ದಾರೆ. ದೇವಾಲಯದ ಅಕ್ಕಪಕ್ಕ ಹಾಗೂ ಹಿಂಭಾಗದ ಖಾಸಗಿ ಜಾಗದಲ್ಲಿ ರಾಸುಗಳನ್ನು ಕಟ್ಟಿ ಮಾರಾಟಕ್ಕಿಟ್ಟಿದ್ದಾರೆ. ಖರೀದಿದಾರರು ಕೂಡ ಬಂದು, ಎಂದಿನಂತೆ ದನಗಳ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ತಡೆಯಲು ಸಾಧ್ಯವಾಗದೆ ದೇವಾಲಯದ ಆಡಳಿತ ಮಂಡಳಿ ಹಾಗೂ ತಾಲೂಕು ಆಡಳಿತ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಕೆಂಗಲ್​ ಆಂಜನೇಯಸ್ವಾಮಿ ದನಗಳ ಜಾತ್ರೆ

ABOUT THE AUTHOR

...view details